ಶುಕ್ರವಾರ, ಆಗಸ್ಟ್ 6, 2021
21 °C

ತುಮಕೂರು: 11 ಮೇಕೆಗಳ ರಕ್ತ ಹೀರಿದ ಚಿರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Tumku cheetah attack

ತುಮಕೂರು: ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಸಮೀಪದ ಅನುಪಲು ಗ್ರಾಮದ ಕರಿರಂಗಯ್ಯ ಅವರ ಮೇಕೆ ರೊಪ್ಪಕ್ಕೆ ಶುಕ್ರವಾರ ರಾತ್ರಿ ಚಿರತೆ ನುಗ್ಗಿ 11 ಮೇಕೆಗಳ ರಕ್ತ ಹೀರಿದೆ.

ಕರಿರಂಗಯ್ಯ ಅನಾರೋಗ್ಯದಿಂದ ಬಳಲುತ್ತಿದ್ದು ತುಮಕೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ನಿಗಾ ವಹಿಸಲು ಮಕ್ಕಳು ಜತೆಯಲ್ಲಿ ಇದ್ದಾರೆ. ಮನೆಯಲ್ಲಿ ಕರಿರಂಗಯ್ಯ ಅವರ ಪತ್ನಿ ಹಾಗೂ ಹೆಣ್ಣು ಮಕ್ಕಳು ಇದ್ದಾರೆ.

ಶನಿವಾರ ಬೆಳಿಗ್ಗೆ ರೊಪ್ಪದಿಂದ ಚಿರತೆ ಹೊರ ಹೋಗಿದೆ. ಇದನ್ನು ಮನೆಯವರು ನೋಡಿದ್ದಾರೆ. ರೊಪ್ಪದ ತುಂಬಾ ರಕ್ತ ಹರಿದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು