ಸೋಮವಾರ, ನವೆಂಬರ್ 18, 2019
25 °C

ತುಮಕೂರು ಜಿಲ್ಲೆಯಲ್ಲಿ ನಗುತಿದೆ ಬೆಳೆ

Published:
Updated:

ತುಮಕೂರು: ಇಲ್ಲಿನ ಕೆಲವು ಪ್ರದೇಶಗಳಲ್ಲಿ ವಾರ್ಷಿಕ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. 

ರಾಗಿ ಹೊಲಗಳು ಸಮೃದ್ಧವಾಗಿ ಬೆಳೆದು ನಿಂತಿದ್ದು, ತೆನೆಯ ಭಾರ ಹೆಚ್ಚಾಗಿ ನೆಲಕ್ಕೆ ಬಾಗುತ್ತಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. 

ತೆನೆಗಳು ನೆಲಕ್ಕೆ ತಾಗಿದರೆ ಮೊಳಕೆ ಬಂದು ಬೆಳೆ ಹಾಳುಗುತ್ತದೆ. ಮೇವು ಸಹ ಹಾಳುಗುತ್ತದೆ. ಇದು ಅತ್ಯಂತ ಅಪಾಯ ಸ್ಥಿತಿ. ಹದಿನೈದು ವರ್ಷಗಳ ನಂತರ ಹೊಲಗಳಲ್ಲಿ ಈ ರೀತಿಯ ಸಮೃದ್ಧತೆ ನೋಡುತ್ತಿದ್ದೇವೆ ಎನ್ನುತ್ತಾರೆ ಮುದಿಗೌಡನ ಹಳ್ಳಿ ಕಾಮಣ್ಣ.

ಈ ಬಾರಿಯ ಮಳೆಯು ಬೆಳೆಯ ಇಳುವರಿ ಹೆಚ್ಚಿಸಿದೆ. ಇಳುವರಿಯಿಂದ ರಾಗಿ ಬೆಲೆಯು ಕುಸಿಯುವ ಹಂತ ತಲುಪಿದೆ. ಬೆಲೆ ಕುಸಿತದಲ್ಲಿ ರೈತರ ಸ್ಥಿತಿ ಚಿಂತಾಜನಕ ಎನ್ನುತ್ತಾರೆ ಜೋನಿಗರಹಳ್ಳಿ ರವೀಶ್.

ಪ್ರತಿಕ್ರಿಯಿಸಿ (+)