ತುಮಕೂರು: ‘ಆನ್‌ಲೈನ್‌ನಲ್ಲಿ ಸಾಲ ಕೊಡಿಸುವುದಾಗಿ’ ನಂಬಿಸಿ ನಗರದ ರಂಗಾಪುರ ಚೆಕ್‌ಪೋಸ್ಟ್ ನಿವಾಸಿ ಆನಂದಕುಮಾರ್ ಓಜ ಎಂಬುವರಿಗೆ ₹6.11 ಲಕ್ಷ ವಂಚಿಸಲಾಗಿದೆ.
ಆನಂದಕುಮಾರ್ ಅವರಿಗೆ ಅಪರಿಚಿತರೊಬ್ಬರು ಕರೆ ಮಾಡಿ ‘ಆನ್‌ಲೈನ್ ಫೈನಾನ್ಸ್ ಲಿಮಿಟೆಡ್’ ಕಂಪನಿಯ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾರೆ. ನಿಮಗೆ ಅಗತ್ಯ ಇದ್ದರೆ ಆನ್‌ಲೈನ್ ಮೂಲಕ ಲೋನ್ ನೀಡುತ್ತೇವೆ’ ಎಂದು ತಿಳಿಸಿದ್ದಾರೆ. ಮೊದಲಿಗೆ ಜಿಎಸ್‌ಟಿ, ತೆರಿಗೆ ಹಣ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನು ನಂಬಿ ವಿವಿಧ ಯುಪಿಐ ಐ.ಡಿಗೆ ಹಂತ ಹಂತವಾಗಿ ₹6,11,612 ಹಣ ವರ್ಗಾಯಿಸಿದ್ದಾರೆ. ಹಣ ಪಡೆದ ಸೈಬರ್ ವಂಚಕರು ಲೋನ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಅನುಮಾನಗೊಂಡು ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.