ಶನಿವಾರ, ಜುಲೈ 31, 2021
27 °C
ಶಿರಾ: ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ ರೈತರು

ಬಿತ್ತನೆಗೆ ಹೊಲ ಹಸನು

ಎಚ್.ಸಿ.ಅನಂತರಾಮು Updated:

ಅಕ್ಷರ ಗಾತ್ರ : | |

Prajavani

ಶಿರಾ: ತಾಲ್ಲೂಕಿನಲ್ಲಿ ರೈತರು ಬಿತ್ತನೆಗಾಗಿ ಜಮೀನು ಹಸನು ಮಾಡಿಕೊಂಡಿದ್ದು, ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ಯಾವುದೇ ನೀರಾವರಿ ಯೋಜನೆಗಳಿಲ್ಲದೆ ಮಳೆಯನ್ನೇ ನಂಬಿ ವ್ಯವಸಾಯ ಮಾಡಬೇಕಾದ ಅನಿವಾರ್ಯತೆ ಇದೆ. ಮಳೆ
ಯಿಲ್ಲದೆ ಸತತ ಬರದಿಂದಾಗಿ ರೈತರುನಷ್ಟ ಅನುಭವಿಸುತ್ತಿದ್ದಾರೆ. ಈ ಬಾರಿಯಾದರೂ ಉತ್ತಮ ಬೆಳೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ರೈತರು ಭೂಮಿಯನ್ನು ಹಸನು ಮಾಡಿದ್ದರು.

ಬಿತ್ತನೆ ಪ್ರಮಾಣ: ತಾಲ್ಲೂಕಿನಲ್ಲಿ 58,867 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು, ಇದುವರೆಗೂ ಕೇವಲ 915 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಲಾಕ್‌ಡೌನ್‌ನಿಂದಾಗಿ ಈ ಬಾರಿ ಉದ್ಯೋಗಕ್ಕಾಗಿ ನಗರದತ್ತ ವಲಸೆ ಹೋದವರು ಗ್ರಾಮಗಳಿಗೆ ಮರಳಿದ್ದು, ಕೃಷಿಯತ್ತ ಮುಖ ಮಾಡಿರುವುದರಿಂದ ಬಿತ್ತನೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ಮಳೆ ಪ್ರಮಾಣ: ಜನವರಿಯಿಂದ ಜೂನ್ 8ರ ವರೆಗೆ ವಾಡಿಕೆಯಂತೆ 132 ಮಿ.ಮೀ ಮಳೆಯಾಗಬೇಕಿತ್ತು ಆದರೆ 103 ಮಿ.ಮೀ ಮಳೆಯಾಗಿದೆ. ಮೋಡದ ವಾತಾವರಣ ಇದ್ದರೂ ಮಳೆಯಾಗದೆ ಗಾಳಿ ಮಾತ್ರ ಬೀಸುತ್ತಿರುವುದು ರೈತರಲ್ಲಿ ನಿರಾಶೆ ಮೂಡಿಸಿದೆ.

ಬಿತ್ತನೆ ಬೀಜ: ಹೆಸರು, ಅಲಸಂದೆ, ಮುಸುಕಿನ ಜೋಳ, ರಾಗಿ, ತೊಗರಿ, ನವಣೆ, ಶೇಂಗಾದ 2,700 ಕ್ವಿಂಟಲ್ ಬಿತ್ತನೆ ಬೀಜವನ್ನು ಕೃಷಿ ಇಲಾಖೆ ದಾಸ್ತಾನು ಇದೆ. ಅದರಲ್ಲಿ 1,719 ಕ್ವಿಂಟಲ್ ಈಗಾಗಲೇ ವಿತರಿಸಲಾಗಿದೆ.

ತಾಲ್ಲೂಕಿನಲ್ಲಿ ಶೇಂಗಾ ಪ್ರಮುಖ ಬೆಳೆಯಾಗಿದ್ದು, 37,510 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಬೇಕಿದ್ದು, ಈವರೆಗೆ 450 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಕೃಷಿ ಇಲಾಖೆಯಿಂದ 2,556 ಕ್ವಿಂಟಲ್ ಶೇಂಗಾ ಬಿತ್ತನೆ ಬೀಜ ದಾಸ್ತಾನು ಮಾಡಿದ್ದು, ಅದರಲ್ಲಿ 1,626.80 ಕ್ವಿಂಟಲ್ ಶೇಂಗಾ ವಿತರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು