ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಹಳ್ಳಿಗೂ ತುಂಗಭದ್ರಾ ನೀರು

ಶಾಸಕ ವೆಂಕಟರಮಣಪ್ಪ ಭರವಸೆ
Last Updated 28 ನವೆಂಬರ್ 2020, 6:15 IST
ಅಕ್ಷರ ಗಾತ್ರ

ವೈ.ಎನ್.ಹೊಸಕೋಟೆ: ವರ್ಷದೊಳಗೆ ತಾಲ್ಲೂಕಿನ ಪ್ರತಿ ಹಳ್ಳಿಗೂ ತುಂಗಾಭದ್ರ ನದಿಯಿಂದ ಕುಡಿಯುವ ನೀರು ಹರಿಯಲಿದೆ ಎಂದು ಶಾಸಕ ವೆಂಕಟರಮಣಪ್ಪ ಹೇಳಿದರು.

ಗ್ರಾಮದ ಹಳೇ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ನೀರು ಶೇಖರಣಾ ಘಟಕದ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ತಾಲ್ಲೂಕಿನ ಪ್ರತಿಹಳ್ಳಿಗೂ ಶುದ್ಧ ಕುಡಿಯುವ ನೀರು ಪೂರೈಸುವ ತುಂಗಭದ್ರ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ಹಲವೆಡೆ ನೀರಿನ ಶೇಖರಣೆಯ ಘಟಕಗಳು ನಿರ್ಮಾಣವಾಗಿವೆ. ಉಳಿದವುಗಳಿಗೆ ಕಾಮಗಾರಿ ನಡೆಯುತ್ತಿದೆ. ವರ್ಷದೊಳಗೆ ಯೋಜನೆ ಪೂರ್ಣಗೊಳ್ಳಲಿವೆ. ಪ್ರತಿ ಹಳ್ಳಿಗೂ ಈ ನೀರಿನ ಸೌಲಭ್ಯ ದೊರೆಯಲಿದೆ. ಪ್ರಸ್ತುತ ಗ್ರಾಮದಲ್ಲಿ ಪ್ರಾರಂಭವಾಗಿರುವ ನೀರು ಶೇಖರಣಾ ಘಟಕವು 3.5 ಲಕ್ಷ ಲೀಟರ್ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ₹ 48 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಮುಂದಿನ 4 ತಿಂಗಳೊಳಗಾಗಿ ಪೂರ್ಣಗೊಳ್ಳಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಮ್ಮ ತಿಮ್ಮಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಪಿ.ಸಿ.ನಾಗರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ನಾಗರಾಜ್, ಉಪಾಧ್ಯಕ್ಷ ಪಿ.ಎ. ಶ್ರೀನಿವಾಸ, ಸದಸ್ಯರಾದ ತಿಪ್ಪೇಸ್ವಾಮಿ, ಎಚ್.ಪಿ.ಕೃಷ್ಣಪ್ಪ, ಶ್ರೀನಿವಾಸ, ಗೋವಿಂದಪ್ಪ, ಹನುಮಂತರಾಯ, ಎಇಇ ಹನುಮಂತರಾಯಪ್ಪ, ಎಇ ಬಸಲಿಂಗಪ್ಪ, ಮುಖಂಡರಾದ ಷಂಷುದ್ದೀನ್, ಎನ್.ಆರ್.ಅಶ್ವಥ್, ಪಿ.ಸಿ.ಗೋಪಿ, ಗೋಪಾಲ, ಶಿವಾನಂದಗುಪ್ತ, ಟಿ.ಅರ್.ವಿ.ಪ್ರಸಾದ್, ಎಚ್.ಆನಂದ ಮತ್ತು ಮೆಗಾ ನಿರ್ಮಾಣ ಸಂಸ್ಥೆಯ ಎಂಜನಿಯರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT