ತುರುವೇಕೆರೆ: ಪಟ್ಟಣದ ಗ್ರಾಮದೇವತೆ ಉಡುಸಲಮ್ಮ ದೇವಿ ಜಾತ್ರೆ ಅಂಗವಾಗಿ ಆಶ್ಚರ್ಯ ಸಿಡಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ಪಟ್ಟಣ ಸೇರಿದಂತೆ ಅಕ್ಕಪಕ್ಕದ 12 ಗ್ರಾಮಗಳು ಸೇರಿ ಆಚರಿಸುವ ಈ ಜಾತ್ರೆಯಲ್ಲಿ ಸಿಡಿ ಉತ್ಸವ ನೋಡಲು ಸಾವಿರಾರು ಜನ ಪಾಲ್ಗೊಂಡಿದ್ದರು. ಸಿಡಿ ಕಂಬಕ್ಕೆ ಏರುವವರು ಸಿಡಿ ಹಾಡುವ ಅಗ್ನಿವಂಶಸ್ಥರಾಗಿದ್ದು ಸಿ.ಡಿ. ಪೂಜೆಗೆ ನಿಗದಿ ಪಡಿಸಿದ ದಿನದಂದು ದಿನವೆಲ್ಲ ಉಪವಾಸ ವ್ರತದಲ್ಲಿದ್ದರು.

ಸಿಡಿ ಕಂಬಕ್ಕೆ ಏರುವ ವ್ಯಕ್ತಿಯನ್ನು ತಮ್ಮ ಮನೆಯಿಂದ ದೇವಿಯೊಂದಿಗೆ ಮೆರವಣಿಗೆಯ ಮೂಲಕ ಉಡಸಲಮ್ಮ ದೇವಾಲಯದ ಆವರಣಕ್ಕೆ ಕರೆತಂದು ಸಿಡಿ ಕಂಬದ ಎದುರಿನ ಮಂಟಪದಲ್ಲಿ ಕೂರಿಸಿ ಉಯ್ಯಾಲೋತ್ಸವ ಮಾಡಲಾಯಿತು.

ನಂತರ ಸಿಡಿ ಪ್ರಾರಂಭವಾಗಲಿದ್ದು ಸಿ.ಡಿ.ಯ ಕಂಬಕ್ಕೆ ವ್ಯಕ್ತಿಯನ್ನು ಹಗ್ಗದಿಂದ ಕಟ್ಟಿ ಸ್ಥಿರ ಕಂಬದ ಸುತ್ತ ತಿರುಗಿಸಲಾಗುತ್ತದೆ. ಒಬ್ಬರಾದ ಮೇಲೆ ಒಬ್ಬರಂತೆ ಸಿಡಿಯನ್ನು ಆಡುವ ಪ್ರತೀತಿ ಇದೆ. ಪಟ್ಟಣ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಶಾಸಕ ಎಂ.ಟಿ.ಕೃಷ್ಣಪ್ಪ, ಗುಡಿಗೌಡ ಟಿ.ಕೆ.ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-17-2129224620

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.