ತುರುವೇಕೆರೆ: ತಾಲ್ಲೂಕಿನ ವಿವಿಧ ಹೋಬಳಿಗಳಲ್ಲಿ ಪಶು ಆಸ್ಪತ್ರೆ ಇದ್ದರೂ ಅಲ್ಲಿ ಪಶು ವೈದ್ಯಾಧಿಕಾರಿ, ಪಶು ವೈದ್ಯ ಪರೀಕ್ಷಕರು ಮತ್ತು ಸಿಬ್ಬಂದಿ ಇಲ್ಲದೆ ರಾಸುಗಳು ಹಲವು ರೋಗಗಳಿಗೆ ತುತ್ತಾದರೂ ಪರಿಹಾರ ಸಿಗುತ್ತಿಲ್ಲ.

ತಾಲ್ಲೂಕಿನ ಕಸಬಾ, ದಂಡಿನಶಿವರ, ಮಾಯಸಂದ್ರ ಮತ್ತು ದಬ್ಬೇಘಟ್ಟ ಹೋಬಳಿಗಳಲ್ಲಿ ಒಟ್ಟು 21 ಪಶು ಆಸ್ಪತ್ರೆಗಳಿವೆ. ಅವುಗಳಿಗೆ 88 ಹುದ್ದೆಗಳು ನೇಮಕವಾಗಬೇಕು. ಆದರೆ ಆ ಪೈಕಿ ಕೇವಲ 29 ಹುದ್ದೆಗಳು ಮಾತ್ರ ಪ್ರಸ್ತುತ ಕಾರ್ಯನಿರ್ಹಿಸುತ್ತವೆ. ಜೊತೆಗೆ ಬಿಸಿಲ ಬೇಗೆಯಿಂದ ರೈತರಿಗೆ ಅಥವಾ ರಾಸು ಸಾಕಿದವರಿಗೆ ಸಕಾಲ ಚಿಕಿತ್ಸೆ, ಔಷಧಿ, ಮಾತ್ರೆ ಸಿಗದೆ ಪರದಾಡುವಂತಾಗಿದೆ.

ತಾಲ್ಲೂಕಿನ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಾದ ಹುಲ್ಲೇಕೆರೆ, ಮಾಚೇನಹಳ್ಳಿ ಚಾಕುವಳ್ಳಿ ಸೇರಿದಂತೆ ಹಲವೆಡೆಗಳಲ್ಲಿ ಕಾಯಂ ಪಶು ವೈದ್ಯರಾಗಲಿ ಅಥವಾ ಪಶು ಪರೀಕ್ಷಕರಾಗಲಿ ಇಲ್ಲ. ಇಲ್ಲಿ ಕೇವಲ ತಾತ್ಕಾಲಿಕ ವೈದ್ಯರಷ್ಟೇ ಕೆಲಸ ನಿರ್ವಹಿಸುತ್ತಾರೆ. ಉಳಿದಂತೆ ಇಲ್ಲಿನ ಸಿಬ್ಬಂದಿಗಳೇ ನೋಡಬೇಕಿದೆ. ಯಾವುದೇ ಆಸ್ಪತ್ರೆಗೆ 2 ಡಿ ಗ್ರೂಪ್, ಒಬ್ಬರು ಪಶು ಪರೀಕ್ಷಕರು ಮತ್ತು ಪಶು ವೈದ್ಯಾಧಿಕಾರಿ ನೇಮಕವಾಗಬೇಕು. ಹೀಗಿರುವಾಗ ಬಹುತೇಕ ಪಶು ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಾಣಿಗಳ ಸಂಖ್ಯೆ: ತಾಲ್ಲೂಕಿನಲ್ಲಿ 32,617 ವಿವಿಧ ಜಾತಿಯ ದನಗಳು, ಎಮ್ಮೆ 24, 768, ಕುರಿ 45,644, ಮೇಕೆ 33,080, ಹಂದಿ197, ಕೋಳಿ 72,371, ಕೋತಿಗಳು 223, ಕುದುರೆಗಳು 2 ಸೇರಿದಂತೆ ಒಟ್ಟು ತಾಲ್ಲೂಕಿನಲ್ಲಿ 2,08,902 ಪ್ರಾಣಿಗಳಿವೆ.

ತುಮಕೂರು ಜಿಲ್ಲೆಯಲ್ಲೇ ತುರುವೇಕೆರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಮ್ಮೆಗಳನ್ನು ಸಾಕಲಾಗುತ್ತದೆ. ಈ ಭಾಗದಲ್ಲಿ ಹೆಚ್ಚಿನ ಹುಲ್ಲು, ನೀರು ಸೇರಿದಂತೆ ಮೂಲಸೌಕರ್ಯಗಳಿವೆ. ಮುಖ್ಯವಾಗಿ ಎಮ್ಮೆಯ ಹಾಲು ಮತ್ತು ಅದರ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿನ ಜನರು ನಿತ್ಯ ಬಳಸುತ್ತಾರೆ. ಹಾಗಾಗಿ ಜಿಲ್ಲೆಯಲ್ಲೇ ಎಮ್ಮೆಗಳಿಗೆ ವಿಶೇಷವಾದ ಸ್ಥಾನಮಾನ ತುರುವೇಕೆರೆಯಲ್ಲಿದೆ. ಜತೆಗೆ ತಾಲ್ಲೂಕಿನ ಜನರ ಆರ್ಥಿಕ ಶಕ್ತಿಯೂ ಹೌದು. ಹಾಗಾಗಿ ಎಮ್ಮೆ ಸಾಕಾಣೆ ಹೆಚ್ಚು.

ಖಾಲಿ ಹುದ್ದೆಗಳು: ತುರುವೇಕೆರೆ ಪಟ್ಟಣದಲ್ಲಿನ ಆಸ್ಪತ್ರೆಗೆ 11 ಹುದ್ದೆಗಳು ಮಂಜೂರಾಗಿವೆ. ಆದರಲ್ಲಿ 8 ಹುದ್ದೆ ಖಾಲಿ ಇವೆ. ಮಾಯಸಂದ್ರದಲ್ಲಿ 3, ದಂಡಿನಶಿವರ 3, ದಬ್ಬೇಘಟ್ಟದಲ್ಲಿ 1, ತಂಡಗದಲ್ಲಿ 2, ಬಿಗಿನೇಹಳ್ಳಿ 1, ಮುತ್ತಗದಳ್ಳಿ 3, ಮಾವಿನಕೆರೆ 4, ಅಂಚೀಹಳ್ಳಿ 3, ವಡವನ ಘಟ್ಟ 2, ಸಂಪಿಗೆ 1, ಕೊಂಡಜ್ಜಿ 3, ಬಾಣಸಂದ್ರ 1, ದೊಂಬರನಹಳ್ಳಿ 2, ಆನೇಕೆರೆ 3, ಲೋಕಮ್ಮನಹಳ್ಳಿ 2, ಚಾಕುವಹಳ್ಳಿ ಪಾಳ್ಳ 3, ಹುಲ್ಲೇಕೆರೆ 3, ಮಾಚೇನಹಳ್ಳಿ 3, ಕುಣಿಕೇನಹಳ್ಳಿ 2, ಮಣೆಚಂಡೂರು 3, ಸಿಗೇಹಳ್ಳಿ 2 ಹುದ್ದೆ ಖಾಲಿ ಇದೆ. ಇವುಗಳಲ್ಲಿ ತುರ್ತು ಇರುವ ಕಡೆ ಹೊರಗುತ್ತಿಗೆ ಆಧಾರದಲ್ಲಿ ಕಿರು ಪರೀಕ್ಷಕರು ಮತ್ತು ಡಿ ಗ್ರೂಪ್ನವರ ಕೆಲಸ ನಿರ್ವಹಿಸುತ್ತಿದ್ದಾರೆ.

ಕಾಲುಬಾಯಿ ಜ್ವರ: ಏಪ್ರಿಲ್ನಿಂದ ಮೇ ತಿಂಗಳವರೆಗೆ ವಿಪರೀತ ಬಿಸಿಲ ಝಳವಿರುತ್ತದೆ. ಸಾಕು ಪ್ರಾಣಿಗಳನ್ನು ಸಂಭಾಳಿಸುವುದು ಕಷ್ಟದ ಕೆಲಸವಾಗುತ್ತದೆ. ಇದು ಮಾರಣಾಂತಿಕ ಕಾಯಿಲೆ. ಈ ಬಿಸಿಲಿನಿಂದ ದನ ಮತ್ತು ಎಮ್ಮೆಗಳಿಗೆ ಕಾಲುಬಾಯಿ ಜ್ವರ ಸಾಂಕ್ರಾಮಿಕ ರೋಗದಂತೆ ಹರಡುತ್ತದೆ ಹೀಗಾಗಿ ರಾಸುಗಳನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು.

ಶಿಥಿಲ ಕಟ್ಟಡ: ತಾಲ್ಲೂಕಿನ ಬಹುಪಾಲು ಪಶು ಆಸ್ಪತ್ರೆಗಳು ನಿರ್ಮಾಣಗೊಂಡು ಮೂವತ್ತು ನಲವತ್ತು ವರ್ಷಗಳೇ ಕಳೆದಿದೆ. ಮಳೆ ಬಂದರೆ ಸೋರುತ್ತವೆ. ದಬ್ಬೇಘಟ್ಟ, ಮಾಚೇನಹಳ್ಳಿ, ಸಂಪಿಗೆ, ಬಾಣಸಂದ್ರ ಆಸ್ಪತ್ರೆ ಕಟ್ಟಡಗಳು ತುಂಬಾ ಶಿಥಿಲವಾಗಿವೆ.

ವಿವಿಧ ರೋಗಗಳು: ತಾಲ್ಲೂಕಿನಲ್ಲಿ ದನ ಮತ್ತು ಎಮ್ಮೆಗಳಿಗೆ ಚರ್ಮಗಂಟು ರೋಗ, ಹುಣ್ಣೆ ಜ್ವರ, ಕಾಲುಬಾಯಿ, ಸೋಂಕು ಜ್ವರ, ಕುರಿಗಳಿಗೆ ಈಟಿ ಮತ್ತು ಕುರಿ, ಮೇಕೆಗಳಿಗೆ ಬರುವ ಎಚ್.ಎಸ್, ಪಿಪಿಆರ್, ಸಿಡುಬು, ರಾಸುಗಳ ಕಾಲು ಮುರಿದಾಗ, ಎಮ್ಮೆಗೆ ರೋಗ, ಸೀಮೆ ಹಸುಗಳಿಗೆ ಕೆಚ್ಚಲುಬಾವು, ಮೇಕೆ ಮತ್ತು ಕುರಿಗಳಿಗೆ ದೊಮ್ಮೆ, ಬಾಯಲ್ಲಿ ಹುಣ್ಣಿನ ರೋಗ ಸೇರಿದಂತೆ ಅನೇಕ ರೋಗಗಳು ಬರುತ್ತವೆ. ಇಂತಹ ಸಂದರ್ಭದಲ್ಲಿ ವೈದ್ಯರ ಸೇವೆ ಅಗತ್ಯ. ವೈದ್ಯರೇ ಇಲ್ಲದಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದೆ ಎಂದು ಕುರಿಗಾಹಿ ಹಾಲೇಗೌಡ ತಿಳಿಸಿದರು.

ಸಿಬ್ಬಂದಿ, ವೈದ್ಯರನ್ನು ನೇಮಿಸಿ

ಹಳ್ಳಿಗಳಲ್ಲಿ ರಾಸುಗಳ ಸಂಖ್ಯೆ ಹೆಚ್ಚುತ್ತಿವೆ. ದೊಂಬರನಹಳ್ಳಿ ಆಸ್ಪತ್ರೆಯಲ್ಲಿ ಈಗಿರುವ ಒಬ್ಬರೇ ವೈದ್ಯರು ಮೂರು ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಾರೆ. ಇಲ್ಲಿ ಸಮಸ್ಯೆ ಉಂಟಾದಾಗ ಮುಖ್ಯ ವೈದ್ಯರಿಲ್ಲ. ಕೇವಲ ಸಿಬ್ಬಂದಿ ನೋಡಬೇಕಿದೆ. ಸರ್ಕಾರ ನಿಗದಿತ ಸಂಖ್ಯೆಯ ಸಿಬ್ಬಂದಿ ಮತ್ತು ವೈದ್ಯರನ್ನು ನೇಮಿಸಬೇಕು.

ಎ.ಆರ್.ರೇವಂತ್, ಅಕ್ಕಳಸಂದ್ರ ಗೊಲ್ಲರಹಟ್ಟಿ ಬಾರೆ

ನೂತನ ಕಟ್ಟಡ ನಿರ್ಮಾಣವಾಗಲಿ

ಬಾಣಸಂದ್ರ ಹೋಬಳಿ ಕೇಂದ್ರ ಆದರೂ ಇಲ್ಲಿನ ಪಶುಆಸ್ಪತ್ರೆ ಪಾಳು ಮನೆಯಂತೆ ಇದೆ. ಕಾಯಂ ವೈದ್ಯರಿಲ್ಲ. ಆಧುನಿಕ ಉಪಕರಣಗಳಿಲ್ಲ, ಮಳೆಗಾಲದಲ್ಲಿ ಹೆಂಚು ಸೋರುತ್ತದೆ. ಮಳೆ ಪ್ರಾರಂಭಕ್ಕೂ ಮುಂಚೆ ನೂತನ ಕಟ್ಟಡ ನಿರ್ಮಾಣವಾಗಲಿ.

ಬಿ.ಸಿ.ಹೊನ್ನೇಗೌಡ, ಬಾಣಸಂದ್ರ

ತಾಲ್ಲೂಕು ಪಶು ಸಂಗೋಪನೆ ಇಲಾಖೆಯಲ್ಲಿ ವೈದ್ಯರ ಕೊರತೆ ಇದೆ. ಅದರಲ್ಲೂ ಕರುಳು ಶಸ್ತ್ರಚಿಕಿತ್ಸೆ ಮಾಡುವ ವೈದ್ಯರೇ ತುಮಕೂರು ಜಿಲ್ಲೆಯಾದ್ಯಂತ ಬೆರಳೆಣಿಕೆಯಷ್ಟು ಇದ್ದಾರೆ
ಸಾಗರ್, ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕ

ತಾಲ್ಲೂಕಿನ ಪಶು ವೈದ್ಯ 5, ಪಶು ವೈದ್ಯ ಪರೀಕ್ಷಕ 3, ಪಶುವೈದ್ಯ ಸಹಾಯಕ 9, ಪಶು ವಾಹನ ಚಾಲಕ 1, ದ್ವಿತೀಯ ದರ್ಜೆ ಸಹಾಯಕ 1 ಹುದ್ದೆ ಖಾಲಿ ಇವೆ
ಡಾ.ರೇವಣ್ಣ ಸಿದ್ದಪ್ಪ, ಪಶು ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.