ತುರುವೇಕೆರೆ: ಅಸಮಾನತೆಯಿಂದ ಕೂಡಿರುವ ಸಮಾಜಕ್ಕೆ ಬಸವಣ್ಣರ ತತ್ವಾದರ್ಶ ಅತಿಮುಖ್ಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ಪಟ್ಟಣದ ಕೆರೆಕೋಡಿಯಲ್ಲಿರುವ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕ, ಮಹಿಳಾ ಮತ್ತು ಯುವ ಘಟಕ ಹಾಗೂ ಎಲ್ಲ ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಬಸವ ಜಯಂತಿ ಮತ್ತು ಸಾಮೂಹಿಕ ಇಷ್ಟಲಿಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.

12ನೇ ಶತಮಾನದಲ್ಲಿಯೇ ಜಾತೀಯತೆ, ಮೌಡ್ಯವನ್ನು ಮೆಟ್ಟಿ ನಿಂತು ಎಲ್ಲ ಜಾತಿಯವರಿಗೂ ಸ್ಥಾನಮಾನ ನೀಡಿ ಸಮಾಜ ಸುಧಾರಕರಾಗಿದ್ದರು. ಮಹಿಳೆಯರಿಗೂ ಸ್ಥಾನಮಾನ ಕಲ್ಪಿಸಿದ ಮಹಾನ್ ಚೇತನ. ಬಸವಣ್ಣನ ತತ್ವ, ಸಿದ್ಧಾಂತಗಳು ನಿರಂತರವಾಗಿದ್ದು ಎಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಪ್ರದಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಮಾತನಾಡಿ, ಸಮಾನತೆ ಸಾರಿದ ಬಸವಣ್ಣನ ಜಯಂತಿಯನ್ನು ಎಲ್ಲ ವರ್ಗದ ಜನರು ಸೇರಿ ಆಚರಿಸಬೇಕು ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಮುಕ್ತಾಂಭ ಮಾತನಾಡಿ, 12 ನೇಶತಮಾನದಲ್ಲಿಯೇ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿ ಮಹಿಳಾ ಮೀಸಲಾತಿ ನೀಡಿದ್ದರು ಎಂದರು.

ಗೊಲ್ಲಹಳ್ಳಿ ಸಿದ್ದಲಿಂಗೇಶ್ವರ ಸಂಸ್ಥಾನದ ವಿಭವ ವಿದ್ಯಾಶಂಕರ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಬೆಳಗ್ಗೆ 7ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನೆಡೆಯಿತು. ಸಾಧಕರಾದ ಶರಣ ಕೆ.ಆರ್.ಶಿವರಾಮ್ (ಕೊಪ್ಪ), ಸ್ಫೂರ್ತಿ ಅವರನ್ನು ಸತ್ಕರಿಸಲಾಯಿತು. ತಾಲ್ಲೂಕು ಮಹಿಳಾ ಘಟಕ, ಯುವ ಘಟಕದ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನಡೆಸಲಾಯಿತು. ಯುವ ಘಟಕದಿಂದ ಬಸವೇಶ್ವರರ ಫೊಟೊ ನೀಡಲಾಯಿತು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ಕುಮಾರಸ್ವಾಮಿ ಮಹಿಳಾ ಘಟಕದ ರಾಜ್ಯ ಸಮಿತಿ ಸದಸ್ಯೆ ನಾಗರತ್ನಮ್ಮ, ತಾಲ್ಲೂಕು ಅಧ್ಯಕ್ಷೆ ದೇವಮ್ಮಶಂಕರಪ್ಪ, ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ, ಜಿಲ್ಲಾಧ್ಯಕ್ಷ ದರ್ಶನ್, ತಾಲ್ಲೂಕು ಅಧ್ಯಕ್ಷ ನಿಜಗುಣ, ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ಎಂ.ವಿಜಯಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೊಡಗಿಹಳ್ಳಿಸಿದ್ದಲಿಂಗಪ್ಪ, ನೊಳಂಬ ಲಿಂಗಾಯಿತ ಸಂಘದ ನಿರ್ದೇಶಕ ಎಂ.ದೇವರಾಜು, ಗುರುಚನ್ನಬಸವಯ್ಯ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-17-1240063810

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.