ತುರುವೇಕೆರೆ: ತಾಲ್ಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯ ಕಾರ್ಯಪಾಲಕ ಎಂಜಿನಿಯರ್ ಅಬ್ದುಲ್ ಹಾಷಂ ಬುಧವಾರ ಮುನಿಯೂರಿನ ವಿವೇಕಾನಂದ ನಗರದ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನೀರಿನ ಘಟಕಗಳು ಕಾರ್ಯನಿರ್ವಹಿಸದ ಬಗ್ಗೆ ‘ಕೆಟ್ಟು ನಿಂತ ಶುದ್ಧ ನೀರಿನ ಘಟಕಗಳು’ ಶೀರ್ಷಿಕೆಯಡಿ ಬುಧವಾರ ‘ಪ್ರಜಾವಾಣಿ’ಯಲ್ಲಿ ಸುದ್ದಿ ಪ್ರಕಟವಾಗಿತ್ತು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಯೋಜನೆಯಡಿ ತಾಲ್ಲೂಕಿನಲ್ಲಿ 96 ಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳಲ್ಲಿ 76 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 25 ಘಟಕಗಳು ಕೆಟ್ಟಿವೆ. ಇವುಗಳನ್ನು ಗ್ರಾಮ ಪಂಚಾಯಿತಿ ಮತ್ತು ಏಜೆನ್ಸಿಗಳ ನಿರ್ವಹಣೆ ಮಾಡುತ್ತಿವೆ. ಈ ಘಟಕಗಳು ಸ್ಥಗಿತಗೊಂಡು ಎರಡು ವರ್ಷವಾದರು ದುರಸ್ತಿ ಮಾಡಿರಲಿಲ್ಲ. ‘ಕೆಟ್ಟು ಹೋದ ನೀರಿನ ಘಟಕಗಳ ಪೈಕಿ ಹತ್ತನ್ನು ವಾರದೊಳಗೆ ದುರಸ್ತಿ ಮಾಡಿ ಜನರ ಉಪಯೋಗಕ್ಕೆ ಅನುವು ಮಾಡಿಕೊಡಲಾಗುವುದು ಮತ್ತು ಇನ್ನುಳಿದವುಗಳ ದುರಸ್ತಿ ಮಾಡಲು ಹೆಚ್ಚಿನ ಅನುದಾನಕ್ಕೆ ಮೇಲಧಿಕಾರಿಗಳಿಗೆ ಯೋಜನೆ ಕಳುಹಿಸಿಕೊಡಲಾಗಿದ್ದು ಹಣ ಬಂದ ಬಳಿಕ ಅವುಗಳನ್ನು ಸರಿಪಡಿಸಲಾಗುವುದು’ ಎಂದು ಅಬ್ದುಲ್ ಹಾಷಂ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-17-81011043

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.