ತುರುವೇಕೆರೆ: ಯುಗಾದಿ ವರ್ಷತೊಡಕು ಪ್ರಯುಕ್ತ ತಾಲ್ಲೂಕಿನಾದ್ಯಂತ ಮಾಂಸ, ಮೀನು, ಕೋಳಿ ಖರೀದಿಸಲು ಶುಕ್ರವಾರ ಜನರು ಮುಗಿಬಿದ್ದರು.

ಪಟ್ಟಣದ ದಬ್ಬೇಘಟ್ಟ, ಮಾಯಸಂದ್ರ, ತಿಪಟೂರು ಮತ್ತು ಬಾಣಸಂದ್ರ ರಸ್ತೆಯ ಕೋಳಿ, ಟಗರು, ಹೋತದ ಮಾಂಸದಂಗಡಿ ಮುಂದೆ ಜನರು ಮುಂಜಾನೆಯಿಂದಲೇ ದೂರದ ಹಳ್ಳಿಗಳಿಂದ ಮಾಂಸ ಖರೀದಿಸಲು ಬಂದಿದ್ದರು. ಬಿಸಿಲಿನ ತಾಪ ಹೆಚ್ಚಾದಂತೆ ಅಂಗಡಿ ಮಾಲೀಕರು ಗ್ರಾಹಕರಿಗೆ ಶಾಮಿಯಾನ ವ್ಯವಸ್ಥೆ ಕೂಡ ಮಾಡಿಸಿದರು.

ತಾಲ್ಲೂಕಿನ ದಂಡಿನಶಿವರ, ಕುರುಬರಹಳ್ಳಿ ಬ್ಯಾಲಾ, ಬಾಣಸಂದ್ರ, ಸುಂಕಲಾಪುರ, ದಬ್ಬೇಘಟ್ಟ, ಕೊಂಡಜ್ಜಿ, ಮುನಿಯೂರು, ದೊಡ್ಡಾಘಟ್ಟ, ಕಣತೂರು, ಶೆಟ್ಟಿಗೊಂಡನಹಳ್ಳಿ, ವಿವೇಕಾನಂದ ನಗರ, ಗೋರಾಘಟ್ಟ, ಮಾಯಸಂದ್ರ, ಕಸಬಾ ಮತ್ತು ದಬ್ಬೇಘಟ್ಟ ವ್ಯಾಪ್ತಿಯ ಗ್ರಾಮಗಳಲ್ಲಿ ಗುಡ್ಡೆ ಬಾಡಿಗೆ ಭಾರಿ ಬೇಡಿಕೆ ಇತ್ತು.

ಕೆಲ ವ್ಯಾಪಾರಿಗಳು ಫಾರ್ಮ್ಹೌಸ್ ಮತ್ತು ರೈತರು ಸಾಕಿದ ಹೋತ ಮತ್ತು ಟಗರುಗಳನ್ನು ತಂದು ಕೆ.ಜಿಗೆ ₹650ರಿಂದ ₹800 ರವರೆಗೆ ಮಾರಾಟ ಮಾಡಿದರು. ಅಂಗಡಿ ಮಾಂಸಕ್ಕಿಂತ ಗುಡ್ಡೇ ಬಾಡಿಗೆ ಜನರು ಹೆಚ್ಚಿನ ಆಸಕ್ತಿ ತೋರಿದರು. ಗ್ರಾಹಕರು ಮಧ್ಯಾಹ್ನದವರೆಗೂ ಮಾಂಸ ಖರೀದಿಯಲ್ಲೇ ನಿರತರಾಗಿದ್ದರು.

ಪಟ್ಟಣದ ಕೆರೆಕೋಡಿ ಬಳಿಯ ಮೀನಿನ ಅಂಗಡಿ ಮುಂದೆ ಮುಂಜಾನೆಯಿಂದಲೇ ಜನರು ಜಮಾಮಿಸಿದ್ದರು. ಏಡಿ, ಜಿಲೇಬಿ, ಕಾಟ್ಲಾ, ರೋಹು ಮೀನಿಗಾಗಿ 150–ಎ ರಾಷ್ಟ್ರೀಯ ಹೆದ್ದಾರಿವರೆಗೆ ಸರದಿಯಲ್ಲಿ ನಿಂತಿದ್ದರು. ಮೀನಿನ ಬೆಲೆ ಹೆಚ್ಚಿದ್ದರೂ ಜನರ ಖರೀದಿ ಉತ್ಸಾಹಕ್ಕೆ ಕೊರತೆ ಇರಲಿಲ್ಲ.

ಬಹುಪಾಲು ಗ್ರಾಮಗಳಲ್ಲಿ ಒಂದಿಷ್ಟು ಜನರು ಸೇರಿಕೊಂಡು ವರ್ಷಕ್ಕೊಂದು ಚೀಟಿ ಹಾಕಿ ಅದರಿಂದ ಬಂದ ಹಣದಿಂದ ಯುಗಾದಿ ವರ್ಷತೊಡಕಿನಂದು ಗುಡ್ಡೇಬಾಡು ಮಾಡಿಕೊಂಡು ಹಂಚಿಕೊಂಡರು. ಬಾಗೇವಾಡಿ ಮತ್ತು ಮಹಾರಾಷ್ಟ್ರದಿಂದ ತಂದ ಆಡಿನ ಮಾಂಸಕ್ಕೆ ಬೇಡಿಕೆ ಇರಲಿಲ್ಲ ಎಂದು ಗ್ರಾಹಕರೊಬ್ಬರು ತಿಳಿಸಿದರು.

ಪಟ್ಟಣದ ಪ್ರತಿ ಮಾಂಸ ಮತ್ತು ಕೋಳಿಯ ಅಂಗಡಿ ಬಳಿ ರೈತರು, ವ್ಯಾಪಾರಿಗಳು ಕೊತ್ತಂಬರಿ, ಪುದಿನಿ, ಶುಂಠಿ, ನಿಂಬೆ ಹಣ್ಣು ಇಟ್ಟು ವ್ಯಾಪಾರ ಮಾಡಿದರು. ಮೂರು ಸೌತೆಕಾಯಿಗೆ ₹50ರಿಂದ ₹60 ದರ ಇದ್ದರೆ, ಎರಡು ನಿಂಬೆ ಹಣ್ಣಿಗೆ ₹20 ರೂಪಾಯಿ ಬೆಲೆ ಇತ್ತು. ಮುತ್ತಗದ ಎಲೆ, ಅಡಿಕೆ ತಟ್ಟೆ, ಲೋಟ, ಮೊಸರಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇತ್ತು.

‘ತಾಲ್ಲೂಕಿನ ಹಲವು ಹಳ್ಳಿಗಳಿಂದ ಗ್ರಾಹಕರು ಐದು, ಹತ್ತು ಕೆ.ಜಿ ಟಗರು, ಹೋತದ ಮಾಂಸ ನೀಡುವಂತೆ ಮುಂಗಡವಾಗಿ ತಿಳಿಸಿದ್ದರು. ಈ ಬಾರಿ 17 ಟಗರು, 19ಕ್ಕೂ ಹೆಚ್ಚು ಹೋತಗಳ ಮಾಂಸ ಮಾರಾಟವಾಯಿತು’ ಎಂದು ಮಾಷಾಲ್ಲ ಅಂಗಡಿ ವ್ಯಾಪಾರಿ ಇರ್ಫಾನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-17-1035488583

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.