ಶನಿವಾರ, ಏಪ್ರಿಲ್ 4, 2020
19 °C

ಕಿಡಿಗೇಡಿಗಳಿಂದ ಅಡಿಕೆ, ಬಾಳೆ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ಪಟ್ಟಣದ ಬಾಣಸಂದ್ರ ರಸ್ತೆಯ ಮುಕ್ತಿಧಾಮದ ಬಳಿ ಕೀರ್ತಿಕುಮಾರ್ ಎಂಬವವರ ತೋಟದಲ್ಲಿದ್ದ ಅಡಿಕೆ, ಬಾಳೆ ಗಿಡಗಳನ್ನು ಕಿಡಿಗೇಡಿಗಳು ಕತ್ತರಿಸಿ ಹಾಕಿದ್ದಾರೆ.

2 ವರ್ಷಗಳಿಂದ ಬೆಳೆಸಿದ್ದ ಐದು ನೂರಕ್ಕೂ ಹೆಚ್ಚಿನ ಅಡಿಕೆ ಸಸಿಗಳು, ಹತ್ತಾರು ಬಾಳೆ ಗಿಡಗಳು, ಹನಿ ನೀರಾವರಿ ಉಪಕರಣಗಳು, ಪೈಪ್‌ಗಳನ್ನು ಕತ್ತರಿಸಿದ್ದಾರೆ. ವಾಟರ್ ಟ್ಯಾಂಕ್  ಹಾಳು ಮಾಡಿದ್ದಾರೆ. ತೋಟದಲ್ಲಿದ್ದ ಒಂದು ಸಿಂಥೆಟಿಕ್ ಟ್ಯಾಂಕ್, ಪೈಪ್‌ಗಳನ್ನು ಕಳ್ಳತನ ಮಾಡಿದ್ದಾರೆ. ₹ 40,000 ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.‌ ಪಟ್ಟಣದ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)