ತುರುವೇಕೆರೆ: ಕಾಯಿಸೀಮೆ ಖ್ಯಾತಿಯ ತುರುವೇಕೆರೆ ತಾಲ್ಲೂಕಿನಲ್ಲಿ ಮಳೆಯ ಅಭಾವದಿಂದ ಅಂರ್ತಜಲದ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲಿ ನೀರು ಬರದೆ ತೆಂಗು, ಅಡಿಕೆ ಸೇರಿದಂತೆ ಇನ್ನಿತರ ವಾಣಿಜ್ಯ ಬೆಳೆಗಳು ಒಣಗುತ್ತಿವೆ.

ತಾಲ್ಲೂಕಿನ ಕೆಲ ಗಡಿಭಾಗದ ಗ್ರಾಮಗಳಲ್ಲಿ ಅಲ್ಪ ಸ್ವಲ್ಪ ಮಳೆಯಾಗಿದೆ. ಅದು ಬಿಟ್ಟರೆ ತಾಲ್ಲೂಕಿನಲ್ಲಿ ಮಳೆಯೇ ಇಲ್ಲ. ತುರುವೇಕೆರೆ ಮೂಲಕ ಶಿಂಷಾ ನದಿ ಹರಿದರೂ ಪಟ್ಟಣಿಗರಿಗೆ ಕುಡಿಯುವ ನೀರಿನ ಬರ ಇನ್ನೂ ನೀಗಿಲ್ಲ. ಈಗಾಗಲೇ ಕೆರೆಕಟ್ಟೆ, ಬಾವಿ ಮತ್ತು ಕೊಳವೆಬಾವಿಗಳು ಬತ್ತಿವೆ.

ಕಳೆದ ವರ್ಷದ ಮೇ ತಿಂಗಳಲ್ಲಿ 162.9 ಮಿ.ಮೀಟರ್ ಮಳೆ ಬಿದ್ದಿತ್ತು. ಈಗ ಮೇ ತಿಂಗಳ ಅಂತ್ಯಕ್ಕೆ 9.9 ಮಿ.ಮೀಟರ್ ಮಾತ್ರ ಮಳೆಯಾಗಿದೆ. ಈ ವರ್ಷ ವಾಡಿಕೆಯಂತೆ 665.9 ಮಿ.ಮೀಟರ್ ಮಳೆಯಾಗಬೇಕು. ಆದರೆ ಮೇ ತಿಂಗಳ 3ನೇ ವಾರಕ್ಕೆ 43.83. ಮಿ.ಮೀಟರ್ ಮಾತ್ರ ಮಳೆ ಆಗಿದೆ.

ಅಂರ್ತಜಲದ ಮಟ್ಟ ಸಂಪೂರ್ಣ ಕುಸಿಯುತ್ತಿದೆ. ಸಾವಿರ ಅಡಿ ಕೊಳವೆಬಾವಿ ಕೊರೆಸಿದರೂ ಸರಿಯಾಗಿ ನೀರು ಬರುತ್ತಿಲ್ಲ. ಬೆರಳೆಣಿಕೆಯಷ್ಟು ರೈತರ ಕೊಳವೆ ಬಾವಿಗಳಲ್ಲಿ ನೀರು ಇದೆ. ಕೆಲವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಸ ಕೊಳವೆಬಾವಿ ಕೊರೆಸುತ್ತಿದ್ದಾರೆ.

ತಾಲ್ಲೂಕಿನ ನೇರಳೆಕಟ್ಟೆ, ನೇರಳಕಟ್ಟೆ ಗೊಲ್ಲರಹಟ್ಟಿ, ಮೇಲಿನ ವಳಗೇರಹಳ್ಳಿ ಜೆ.ಸಿ ನಗರ, ದೊಡ್ಡ ಬೀರನಕೆರೆ, ಚಿಕ್ಕ ತುರುವೇಕೆರೆ, ಮಂಗೀಕುಪ್ಪೆ, ಕೆ.ದೊಡ್ಡೇರಿ, ಅಜ್ಜೇನಹಳ್ಳಿ, ಮುಗಳೂರು ಗೊಲ್ಲರಹಟ್ಟಿ, ಹೆಗ್ಗೆರೆ, ಎ.ಹೊಸಹಳ್ಳಿ, ಚಿಕ್ಕೋನಹಳ್ಳಿ, ಡೊಂಕಿಹಳ್ಳಿ, ಜೋಗರಪಾಳ್ಳ, ಸುರಂಗ ನಗರ, ಮಾಯಸಂದ್ರ ದೊಡ್ಡ ಶೆಟ್ಟಿಕೆರೆ, ಆನೇಕೆರೆ ಪಾಳ್ಳ, ರಾಮಸಾಗರ, ರಂಗನಹಳ್ಳಿ ಬಿ.ಪುರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ.

ನೀರಿನ ಸಮಸ್ಯೆ ಇರುವ 12 ಗ್ರಾಮಗಳಿಗೆ ಬೋರ್ವೆಲ್ ಕೊರೆಸಲು ಅನುಮೋದನೆ ಸಿಕ್ಕಿದೆ. ಅವುಗಳ ಪೈಕಿ 4 ಗ್ರಾಮಗಳಲ್ಲಿ ಮಾತ್ರ ಬೋರ್ವೆಲ್ ಕೊರೆಸಲಾಗಿದೆ. ಅದರಲ್ಲಿ ಒಂದು ಬೋರ್ವೆಲ್ ವಿಫಲವಾಗಿದೆ. ನೇರಳಕಟ್ಟೆ ಗೊಲ್ಲರಹಟ್ಟಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕಾರಣ ಟ್ಯಾಂಕರ್ ನೀರು ನೀಡಲಾಗುತ್ತಿದೆ. ಇಲ್ಲಿಗೆ ಹೊಸದಾಗಿ ಕೊಳವೆ ಬಾವಿ ಕೊರೆಸಲಾಗಿದೆ. ಬೆಸ್ಕಾಂನಿಂದ ಅನುಮೋದನೆ ಸಿಕ್ಕ ತಕ್ಷಣ ನೀರು ಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಕೈಕೊಟ್ಟ ಶುದ್ದ ಘಟಕ: ವಿವಿಧ ಯೋಜನೆಯಡಿ ತಾಲ್ಲೂಕಿನಲ್ಲಿ ಒಟ್ಟು 97 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅವುಗಳ ಪೈಕಿ 14 ರಿಪೇರಿ ಹಂತದಲ್ಲಿವೆ. 12 ಘಟಕಗಳ ಯಂತ್ರಗಳಲ್ಲಿ ಹೆಚ್ಚು ದುರಸ್ತಿ ಇದೆ. ಅಮ್ಮಸಂದ್ರ ಮತ್ತು ಹಡನಹಳ್ಳಿ ಜನತಾ ಕಾಲೋನಿಯ 2 ಘಟಕ ಮಾತ್ರ ಸಂಬಂಧಪಟ್ಟ ಏಜೆನ್ಸಿಯವರ ಗಮನಕ್ಕೆ ತರಲಾಗಿದೆ.ಶೀಘ್ರವೇ ರಿಪೇರಿ ಮಾಡುವ ಭರವಸೆ ನೀಡಿದ್ದಾರೆ. ಇನ್ನುಳಿದ 10 ಘಟಕಗಳ ರಿಪೇರಿಗೆ ಸರ್ಕಾರಕ್ಕೆ ಕ್ರಿಯಾ ಯೋಜನೆ ಕಳುಹಿಸಲಾಗಿದೆ.

ಹೇಮೆ ಇದ್ದರೂ ನೀರಿಲ್ಲ: ತಾಲ್ಲೂಕಿಗೆ ಎನ್.ಬಿ.ಸಿ ಮತ್ತು ಟಿಬಿಸಿ ನಾಲೆಯಿಂದ ನೀರು ಹರಿಯುತ್ತದೆ. ಎರಡೂ ನಾಲೆಯಿಂದ ಒಟ್ಟು 4.5 ಟಿಎಂಸಿ ನೀರು ತುರುವೇಕೆರೆಗೆ ನಿಗದಿಯಾಗಿದೆ. ತಾಲ್ಲೂಕಿನಲ್ಲಿ 260 ಗ್ರಾಮಗಳಿವೆ. ಶೇ 60ರಷ್ಟು ಗ್ರಾಮಗಳು ಒಣ ಭೂ ಪ್ರದೇಶಗಳಾಗಿವೆ. ಉಳಿದ ಭಾಗದಲ್ಲಿ ಹೇಮಾವತಿ ನಾಲಾ ನೀರು ಹರಿಯುತ್ತಿತ್ತು. ಆದರೆ ಈ ಬಾರಿ ಹೇಮಾವತಿ ನಾಲಾ ನೀರು ತುರುವೇಕೆರೆಗೆ ನಿಗದಿಪಡಿಸಿದಂತೆ ಹರಿಯಲಿಲ್ಲ. ತಾಲ್ಲೂಕಿನ ಮಲ್ಲಾಘಟ್ಟ, ಸಾರಿಗೆಹಳ್ಳಿ, ಅಮ್ಮಸಂದ್ರ, ಮಾಯಸಂದ್ರ, ಕೊಂಡಜ್ಜಿ, ಸಂಪಿಗೆ ಕೆರೆಗಳ ಗುಂಡಿಗಳಲ್ಲಿ ಅಲ್ಪ ಸ್ವಲ್ಪ ನೀರು ಇದೆ.

40 ಕಿ.ಮೀ ನಿಂದ 70 ಕಿ.ಮೀಟರ್ ಇರುವ ಟಿಬಿಸಿ ನಾಲೆಯಿಂದ ಸುಮಾರು 19 ಕೆರೆಗಳಿವೆ. ಇವುಗಳಲ್ಲಿ ಕುಡಿಯುವ ನೀರಿಗಾಗಿ ಮಲ್ಲಾಘಟ್ಟ ಕೆರೆ ಮಾತ್ರ ಬಳಕೆಯಾಗುತ್ತಿದೆ. ತುಮಕೂರಿನ ಬುಗಡನಹಳ್ಳಿ ಕೆರೆಗೆ ಹೇಮೆ ನೀರು ಬಿಟ್ಟಿದ್ದಾರೆ. ಆದರೆ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಅಭಾವವಿದ್ದರು ಸಹ ಯಾವ ಕೆರೆಗಳಿಗೂ ನೀರು ಬಿಡುತ್ತಿಲ್ಲವೆಂಬುದು ಜನಪ್ರತಿನಿಧಿಗಳ ದೂರು.

ಎನ್.ಬಿ.ಸಿ ನಾಲೆ ಮಾಯಸಂದ್ರ ನಾಲಾ ವ್ಯಾಪ್ತಿಯಲ್ಲಿ 27 ಕೆರೆ ಬರುತ್ತವೆ. ಸುಮಾರು 78 ಕಿ.ಮೀಟರ್ ಚಾನೆಲ್ ಕೂಡ ಇದೆ. ಈ ನಾಲೆಯಿಂದ ಮಾಯಸಂದ್ರ ಹೋಬಳಿಗೆ 1.5 ಟಿಎಂಸಿ ನೀರು ಹರಿಯಬೇಕು. ಈ ಬಾರಿ ಅಷ್ಟೂ ನೀರು ಹರಿಯಲಿಲ್ಲ ಎಂಬುದು ಜನರ ದೂರು.

ತಾಲ್ಲೂಕಿನಲ್ಲಿ 1,52,625 ಜನಸಂಖ್ಯೆ ಇದೆ. 46,666 ಕುಟುಂಬಗಳಿವೆ. ಇವೆಲ್ಲವೂ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನೇ ಹೆಚ್ಚಾಗಿ ಅವಲಂಬಿಸಿವೆ. ಬೇಸಿಗೆಯಲ್ಲಿ ನೀರಿಲ್ಲದೆ ಗ್ರಾಮ ಪಂಚಾಯಿತಿ ಕೊಳವೆಬಾವಿ ಪಂಪ್ಸೆಟ್ ಸುಟ್ಟು ಹೋಗುತ್ತಿವೆ. ಒಂದು ರಿಪೇರಿ ಮಾಡುವುದರೊಳಗೆ ಮೂರ್ನಾಲ್ಕು ಕೆಟ್ಟು ನಿಲ್ಲುತ್ತಿವೆ ಎಂಬುದು ಅಧಿಕಾರಿಗಳ ಅಳಲು.

ಮೇ ತಿಂಗಳವರೆಗೆ ರೈತರು ತಮ್ಮ ಕೃಷಿ ಕಾರ್ಯ ಚಟುವಟಿಕೆಗೆ 30 ಕೊಳವೆಬಾವಿ ಕೊರೆಸಿದ್ದಾರೆ. ತಾಲ್ಲೂಕಿನಲ್ಲಿ ಸುಮಾರು 1063 ಕೊಳವೆಬಾವಿ, ಸುಮಾರು 1000ಕ್ಕೂ ಹೆಚ್ಚು ಹ್ಯಾಂಡ್ ಜಗ್, 1200ಕ್ಕೂ ಹೆಚ್ಚು ಕಿರು ನೀರು ಸರಬರಾಜಿನ ಸಿಸ್ಟನ್ ಮತ್ತು ಸುಮಾರು 96 ಓವರ್ ಹೆಡ್ ಟ್ಯಾಂಕ್ ಇವೆ.

ಪಟ್ಟಣದಲ್ಲಿ ಸುಮಾರು 16,350 ಜನಸಂಖ್ಯೆ ಇದೆ. ಇಲ್ಲಿನ ಜನರಿಗೆ ಮಲ್ಲಾಘಟ್ಟ ಕೆರೆಯಿಂದ ವರ್ಷಕ್ಕೆ 20 ಲಕ್ಷ ಲೀಟರ್ ನೀರು ಪೂರೈಸಲಾಗುತ್ತಿದೆ. ಮಲ್ಲಾಘಟ್ಟ ಕೆರೆಯ ನೀರಿನ ಸಾಮರ್ಥ್ಯವೇ 567 ಎಂಸಿಎಫ್ಟಿ ಇದೆ. ಸದ್ಯಕ್ಕೆ 311 ಎಂಸಿಎಫ್ಟಿ ಮಾತ್ರ ನೀರು ಕೆರೆಯಲ್ಲಿದೆ. ಪಟ್ಟಣದ ವ್ಯಾಪ್ತಿ 36 ಕೊಳವೆಬಾವಿಗಳಿವೆ. ಅದರಲ್ಲಿ 33 ಕೊಳವೆಬಾವಿ ಮಾತ್ರ ಕೆಲಸ ಮಾಡುತ್ತಿವೆ.

ಪಟ್ಟಣ ಪಂಚಾಯಿತಿಯಿಂದ ಮಲ್ಲಾಘಟ್ಟ ಕೆರೆ ಮತ್ತು ಕೊಳವೆಬಾವಿಯಿಂದ ಸೇರಿ 108 ಲೀಟರ್ ಮಾತ್ರ ಪೂರೈಕೆ ಮಾಡಲಾಗುತ್ತಿದೆ. ಮೂರು ದಿನಕ್ಕೆ ಒಮ್ಮೆ ಮಾತ್ರ ಪಟ್ಟಣಿಗರಿಗೆ ನೀರು ಪೂರೈಕೆಯಾಗುತ್ತಿದೆ. ಹೇಮಾವತಿ ಇಲಾಖೆಯ ಬಳಿ ಅಮೃತ್ 2 ಕುಡಿಯುವ ನೀರಿನ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ.

ಸೊರಗಿದ ತೆಂಗು, ಅಡಿಕೆ: ಇಲ್ಲಿನ ಜನರ ವಾಣಿಜ್ಯ ಬೆಳೆಯೇ ತೆಂಗು. ಹೇಮಾವತಿ ನಾಲಾ ನೀರು ಮತ್ತು ಒಂದು ಕ್ವಿಂಟಲ್ ಅಡಿಕೆಗೆ ₹50 ಸಾವಿರ ಬೆಲೆ ದಾಟಿದ ಮೇಲೆ ಅಡಿಕೆ ಬೆಳೆಯುವ ರೈತರ ಸಂಖ್ಯೆ ಹೆಚ್ಚುತ್ತಿದೆ. ತಾಲ್ಲೂಕಿನಲ್ಲಿ ಕಳೆದ ಬಾರಿ 36,282 ಹೆಕ್ಟೇರ್ ತೆಂಗು ಇದ್ದದ್ದು ಈ ಸಲ 33,883ಕ್ಕೆ ಉಳಿದಿದೆ. ಕಳೆದ ಬಾರಿ 5270 ಹೆಕ್ಟೇರ್ ಇದ್ದದು ಈ ಬರಿ 9,704 ಹೆಕ್ಟೇರ್ ಅಡಿಕೆ ಬೆಳೆ ಬೆಳೆಯುವ ಪ್ರದೇಶ ಹೆಚ್ಚಾಗಿದೆ.

ಕೆರೆಗಳ ಸುತ್ತಮುತ್ತಲಿನ ತೋಟ ಸ್ವಲ್ಪ ಹಸಿರಾಗಿರುವುದು ಬಿಟ್ಟರೆ ಉಳಿದಂತೆ ಕೊಳವೆ ಬಾವಿಗಳು ಬತ್ತಿವೆ. ತೆಂಗು ಮತ್ತು ಅಡಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಭಾಗಶಃ ರೈತರು ಹರಸಾಹಸ ಪಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ಮಾವು ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಕಣತೂರು ಮತ್ತು ಶೆಟ್ಟಿಗೊಂಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ವಾರ ಬಿರುಗಾಳಿ ಬೀಸಿದ ಕಾರಣ ಮಾವಿನ ಕಾಯಿ, ಹೀಚು ನೆಲಕ್ಕೆ ಬಿದ್ದಿವೆ.

ತಾಲ್ಲೂಕಿನ ಮೀನುಗಾರಿಗೆ ಇಲಾಖೆ ಮತ್ತು ಇಪ್ಪತ್ತೇಳು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳ 110 ಕೆರೆಗಳಲ್ಲಿ ಮೀನು ಸಾಕಾಣೆಯಾಗುತ್ತಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಬಿಸಿಲಿನ ಬೇಗೆಯಿಂದ ಕೆರೆಗಳಲ್ಲಿ ನೀರು ಇಂಗಿ ಹೋಗಿದೆ. ಮೀನಿನ ಮರಿಗಳು ಸಾಯುತ್ತಿವೆ.

ತಾಲ್ಲೂಕಿನಲ್ಲಿ ವಾಡಿಕೆಗಿಂತಹ ಕಡಿಮೆ ಮಳೆಯಾಗಿರುವ ಕಾರಣ ರಾಗಿ ಹುಲ್ಲಿಗೆ ಬಹು ಬೇಡಿಕೆ ಇದೆ. ಕೆರೆಯಾಶ್ರಿತ ಕೆಲ ರೈತರು ಭತ್ತ ಬೆಳೆಯುತ್ತಾರೆ. ಜೊತೆಗೆ ಬದುಗಳಲ್ಲಿ ನೇಪರ್ ಕಡ್ಡಿ ಬೆಳೆಯುತ್ತಿದ್ದು ಇನ್ನೂ 34 ವಾರಗಳ ತನಕ ಆಗುವಷ್ಟು ಮೇವಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-17-584385790

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.