ತುರುವೇಕೆರೆ: ರಸಗೊಬ್ಬರ ಉತ್ಪಾದಕರು ವ್ಯಾಪಾರಸ್ಥರಿಗೆ ಲಿಂಕ್ ಪ್ರಾಡಕ್ಟ್ಗಳನ್ನು ಕಡ್ಡಾಯಗೊಳಿಸಬಾರದು ಎಂದು ಆಗ್ರಹಿಸಿ ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರ ಸಂಘದಿಂದ ಶಿರಸ್ತೆದಾರ್ ಡಿ.ಆರ್.ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲ್ಲೂಕು ಮಾರಾಟಗಾರರ ಸಂಘದ ಅಧ್ಯಕ್ಷ ರಂಗನಾಥ್ ಮಾತನಾಡಿ, ಸಾಗಾಣಿಕೆ ಮತ್ತು ಸರಕುಗಳ ವೆಚ್ಚ ಭರಿಸಬೇಕು. ರಸಗೊಬ್ಬರಗಳ ಮೇಲಿನ ಗರಿಷ್ಠ ಮೊತ್ತಕ್ಕೆ ಕನಿಷ್ಠ ಶೇಕಡ 8ರಷ್ಟು ಲಾಭಾಂಶ ನೀಡಬೇಕು. ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರಗಳಿಗೆ ಕನಿಷ್ಠ ₹50 ಲಾಭಾಂಶ ನೀಡಬೇಕು ಎಂದು ಒತ್ತಾಯಿಸಿದರು.

ರಸಗೊಬ್ಬರದ ಚೀಲಗಳನ್ನು ಭದ್ರಪಡಿಸಬೇಕು. ಈಗ ಜಾರಿಗೆ ತಂದಿರುವ ಎಫ್ಐಡಿ ವ್ಯವಸ್ಥೆ ಜಾರಿಗೊಳಿಸಲು ಸಮಯಾವಕಾಶ ನೀಡಬೇಕು ಎಂದರು.

ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಶಮನ ಮಾಡಬೇಕು. ರಸಗೊಬ್ಬರ ಮಾರಾಟ ದರ ಕಡಿಮೆಯಾದಲ್ಲಿ ಗೊಬ್ಬರ ತಯಾರಿಕಾ ಕಂಪನಿ ಮಾರಾಟಗಾರರಿಗೆ ಆಗುವ ನಷ್ಟ ಭರಿಸಬೇಕು ಎಂದು ಆಗ್ರಹಿಸಿದರು.

ಕೃಷಿ ಇಲಾಖಾ ಸಹಾಯಕ ನಿರ್ದೇಶಕಿ ಬಿ.ಪೂಜಾ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ರಂಗನಾಥ್, ಉಪಾಧ್ಯಕ್ಷ ಬಸವರಾಜು, ಖಜಾಂಚಿ ಜವರೇಗೌಡ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-17-1047914941

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.