ತುರುವೇಕೆರೆ: ತುರುವೇಕೆರೆ- ಕೆ.ಬಿ.ಕ್ರಾಸ್ವರೆಗೆ ವಿವಿಧ ಗ್ರಾಮಗಳ ಮೂಲಕ ಹಾದು ಹೋಗುವ 150ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಗತ್ಯವಿರುವಷ್ಟು ಮಾತ್ರ ಜಮೀನು ವಶಪಡಿಸಿಕೊಳ್ಳಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಣಕೂರು ಚಂದ್ರಶೇಖರ್ ಆಗ್ರಹಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖಾ ಕಚೇರಿ ಆವರಣದಲ್ಲಿ ಶನಿವಾರ ನಡೆದ ರೈತರೊಂದಿಗೆ ಸಂವಾದದಲ್ಲಿ ಮಾತನಾಡಿದರು.

ರಸ್ತೆ ನಿರ್ಮಾಣ ಮಾಡುವುದು ರಸ್ತೆಯ ಮಧ್ಯಭಾಗದಿಂದ ಎಡ ಮತ್ತು ಬಲ ಭಾಗ 10 ಮೀಟರ್ ಮಾತ್ರ. ಆದರೆ ಭೂಸ್ವಾಧೀನಾಧಿಕಾರಿ ರಸ್ತೆಯ ಎರಡೂ ಬದಿ ತಲಾ 22.50 ಮೀಟರ್ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ರಸ್ತೆ ನಿರ್ಮಿಸಿದ ನಂತರ ಉಳಿದ ಜಮೀನು ಮುಂದಿನ ಕೆಲಸಗಳಿಗೆ ಬೇಕೆನ್ನುವ ಅಧಿಕಾರಿಗಳು ಈಗ ಎಷ್ಟು ಅಗತ್ಯವಿದೆಯೋ ಅಷ್ಟು ಭೂಮಿಯನ್ನು ಮಾತ್ರ ಖರೀದಿಸಿ. ಇಲ್ಲವೇ ಮುಂದಿನ ಹತ್ತು ವರ್ಷಗಳಲ್ಲಿ ಭೂಮಿಗೆ ಎಷ್ಟು ಬೆಲೆ ಇರುವುದೋ ಅಷ್ಟು ಬೆಲೆಯನ್ನು ಈಗಲೇ ಕೊಟ್ಟು ಖರೀದಿಸಿ ಎಂದರು.

150ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಬಂಧ ರೈತರ ಸಭೆ ಕರೆದಿರುವುದು ಕಾಟಾಚಾರವಾಗಿದೆ. ಸೂಕ್ತ ಪೊಲೀಸ್ ಬಂದೋಬಸ್ತ್ ಇಲ್ಲ. ಹಿರಿಯ ಅಧಿಕಾರಿಗಳಿಲ್ಲ. ವಿದ್ಯುತ್ ಇಲ್ಲ ಒಟ್ಟಾರೆಯಾಗಿ ಇದೊಂದು ಕಾಟಾಚಾರದ ಕಾರ್ಯಕ್ರಮ ಎಂದು ರೈತರು ಸಿಡಿಮಿಡಿಗೊಂಡರು.

ಭೂಸ್ವಾಧೀನ ಮಾಡಿಕೊಳ್ಳುವ ವೇಳೆ ಸ್ವತಃ ಭೂಸ್ವಾಧೀನಾಧಿಕಾರಿ ರೈತರ ಜಮೀನಿನ ಬಳಿ ತೆರಳಿ ಅವರು ಬೆಳೆದಿರುವ ಬೆಳೆ, ನಿರ್ಮಿಸಿರುವ ಕಟ್ಟಡಗಳ ಮಾಹಿತಿಯನ್ನು ಪಡೆದು ಸೂಕ್ತ ದರ ನಿಗದಿ ಮಾಡಬೇಕು. ಈಗ ಕರೆಯಲಾಗಿರುವ ಸಭೆ ಅಪೂರ್ಣವಾಗಿದ್ದು, ಮತ್ತೊಂದು ದಿನ ಎಲ್ಲ ಅಧಿಕಾರಿಗಳೊಂದಿಗೆ ಆಗಮಿಸಿ ಸಭೆ ನಡೆಸಬೇಕೆಂದು ಆಗ್ರಹಿಸಿದರು.

ಯಾವುದೇ ಕಾರಣಕ್ಕೂ ರೈತರು ಯಾವ ಇಲಾಖೆಗಳಿಗೂ ದಾಖಲಾತಿಗಳಿಗಾಗಿ ಹೋಗುವುದಿಲ್ಲ. ಪ್ರತಿಯೊಂದು ರೈತರ ದಾಖಲೆಗಳನ್ನು ಅಧಿಕಾರಿಗಳೇ ಪಡೆದುಕೊಳ್ಳಬೇಕು. ರೈತರು ಕೇವಲ ತಮ್ಮ ಆಧಾರ್ ಸಂಖ್ಯೆ, ವಿಳಾಸ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ವಿವರ ಮಾತ್ರ ನೀಡುತ್ತಾರೆ. ಬೇರೆ ದಾಖಲಾತಿ ಬೇಕಾದಲ್ಲಿ ಇಲಾಖೆಯಿಂದ ಸಂಗ್ರಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ವಿಜಯ ನರಸಿಂಹಶೆಟ್ಟಿ, ಭೂ ಸ್ವಾಧೀನ ಅಧಿಕಾರಿ ಧರ್ಮಪಾಲ್, ಭೂ ಸ್ವಾಧೀನ ಕಚೇರಿ ವ್ಯವಸ್ಥಾಪಕ ಮಂಜೇಶ್ ಸಂಜೀವ್ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಚೇತನ್, ಅರಳೀಕೆರೆ, ತಾವರೇಕೆರೆ, ತುರುವೇಕೆರೆ ಪಟ್ಟಣ, ಬಾಣಸಂದ್ರ ಮತ್ತು ಮಾಯಸಂದ್ರದ ರೈತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-17-1519329292

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.