ಗುರುವಾರ , ನವೆಂಬರ್ 14, 2019
19 °C

ಚಿಕ್ಕನಾಯಕನಹಳ್ಳಿ | ಮರಕ್ಕೆ ಕಾರು ಡಿಕ್ಕಿ ಇಬ್ಬರ ಸಾವು

Published:
Updated:

ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕು ಜೆ.ಸಿ.ಪುರ ಬಳಿ ಭಾನುವಾರ ರಾತ್ರಿ ಮರಕ್ಕೆ ಕಾರು ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ದರ್ಶನ್ (23),  ಭರತ್ (22) ಮೃತರು. ಈ ಪೈಕಿ ದರ್ಶನ್ ಎಂಬುವವರು ಹುಳಿಯಾರಿನ ಬಸ್ ಏಜೆಂಟ್ ಕೋಳಿ ರಾಜಣ್ಣ ಅವರ ಮಗನಾಗಿದ್ದು, ಭರತ್ ಎಂಬುವವರು ರಾಜಣ್ಣ ಅವರ ಅಕ್ಕನ ಮಗನಾಗಿದ್ದಾನೆ.

ಮೈಸೂರಿನಲ್ಲಿ ಭಾನುವಾರ ಸಂಬಂಧಿಕರ ಮದುವೆ ಮುಗಿಸಿಕೊಂಡು ಕಾರಿನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.  ಅಪಘಾತದಲ್ಲಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)