ಸೋಮವಾರ, ನವೆಂಬರ್ 18, 2019
24 °C

2013ರಲ್ಲಿ ನಮ್ಮಿಬ್ಬರ ಸೋಲಿಗೆ ಚಲುವರಾಯಸ್ವಾಮಿಯೇ ಕಾರಣ: ಗೌರಿಶಂಕರ್ ಆರೋಪ

Published:
Updated:
Prajavani

ತುಮಕೂರು: ಚೆಲುವರಾಯಸ್ವಾಮಿಯವರಿಗೆ ಮಾಡಲು ಕೆಲಸವಿಲ್ಲ. ಕುಮಾರಸ್ವಾಮಿ ಅವರ ಬಗ್ಗೆ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ತಂದೆ ಸಿ.ಚನ್ನಿಗಪ್ಪ ಮತ್ತು ನಾನು ಸೋಲಲು ಚಲುವರಾಯಸ್ವಾಮಿಯೇ ಕಾರಣ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಆರೋಪಿಸಿದರು.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ,‘ 2013ರಲ್ಲಿ ನಮ್ಮ ತಂದೆ ಮತ್ತು ನಾನು ಸೋಲುವುದಕ್ಕೆ ಅವಕಾಶವೇ ಇರಲಿಲ್ಲ. ನಮಗೆ ಟಿಕೆಟ್ ಕೊಡುವ ಹಂತದಿಂದ ಹಿಡಿದು ಸೋಲಿನವರೆಗೂ ಚಲುವರಾಯಸ್ವಾಮಿ ನಮ್ಮನ್ನು ಕಾಡಿದ್ದರು. ತುಮಕೂರು ಗ್ರಾಮಾಂತರದಲ್ಲಿ ನನ್ನನ್ನು ಮತ್ತು ನಿಂಗಪ್ಪ ಅವರ ನಡುವೆ ಭಿನ್ನಾಭಿಪ್ರಾಯವನ್ನುಂಟು ಮಾಡಿ ನಾನು ಸೋಲುವಂತೆ ಮಾಡಿದರು ಎಂದು ಆಪಾದಿಸಿದರು.

ರಾಜಕೀಯ ಕಾರಣಕ್ಕೆ ಅಪಪ್ರಚಾರ: ಪೋನ್ ಕದ್ದಾಲಿಕೆ ಪ್ರಕರಣ ಕುರಿತು ಸಿಬಿಐ ಸೇರಿದಂತೆ ಅಂತರರಾಷ್ಟ್ರೀಯ ಯಾವುದೇ ತನಿಖಾ ಸಂಸ್ಥೆಯಿಂದಲಾದರೂ ತನಿಖೆ ನಡೆಸಲು ಎಚ್.ಡಿ.ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಅವರೇ ಹೇಳಿದ ಮೇಲೆ ಪದೇ ಪದೇ ಆ ಕುರಿತು ಚರ್ಚೆ ಏಕೆ? ರಾಜಕೀಯ ಕಾರಣಕ್ಕೆ ಅಪಪ್ರಚಾರ ಸಲ್ಲದು ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಅವರ ಪ್ರಕರಣ ವಿಚಾರದಲ್ಲಿ ದೇವೇಗೌಡರ ಕುಟುಂಬವೇ ಬೆನ್ನೆಲುಬಾಗಿ ನಿಂತಿದೆ. ಪ್ರತಿಭಟನೆಗೆ ಹೋಗಲಿಲ್ಲ ಎಂಬ ಕಾರಣ ನೀಡಿ ಆರೋಪ ಮಾಡುವುದು ಸರಿಯಲ್ಲ. ಕುಮಾರಸ್ವಾಮಿ ಅವರೇ ನನಗೂ ಸಮುದಾಯದ ಜನರನ್ನು ಕರೆದುಕೊಂಡು ಪ್ರತಿಭಟನೆಗೆ ಹೋಗು ಎಂದು ಫೋನ್ ಮಾಡಿದ್ದರು ಎಂದು ತಿಳಿಸಿದರು.

17 ಅನರ್ಹ ಶಾಸಕರ ಸ್ಥಿತಿಯೇ ಪಾಠ

‘ಈಗ 17 ಅನರ್ಹ ಶಾಸಕರ ಸ್ಥಿತಿ ಏನಾಗಿದೆ ಎಂಬುದನ್ನು ನೋಡಿಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ಕುರಿತು ನಿರ್ಧಾರ ಮಾಡಬೇಕು ಎಂದು ಮನವಿ ಮಾಡುತ್ತೇನೆ’ ಎಂದು ಗೌರಿಶಂಕರ್ ಹೇಳಿದರು.

ಜನ್ಮದಿನ ಸರಳ ಆಚರಣೆ: ಈ ಬಾರಿ ಜನ್ಮದಿನವನ್ನು ನಾನು ಸರಳ ರೀತಿಯಲ್ಲಿ ಆಚರಿಸಿಕೊಳ್ಳು ತೀರ್ಮಾನಿಸಿದ್ದೇನೆ. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಕೆಲ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ ಪ್ರವಾಹ ಬಾಧಿತ ಪ್ರದೇಶಕ್ಕೆ ನೆರವು ಕಲ್ಪಿಸುವ ಉದ್ದೇಶವಿದೆ ಎಂದು ಹೇಳಿದರು.

 

ಪ್ರತಿಕ್ರಿಯಿಸಿ (+)