ಬುಧವಾರ, ನವೆಂಬರ್ 20, 2019
22 °C

ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಗಲಾಟೆ

Published:
Updated:

ತುಮಕೂರು: ನಗರದ ಮರಳೂರು ದಿಣ್ಣೆ ಯ ಎಸ್‌ಎಸ್‌ಐಟಿ ಕಾಲೇಜಿನಲ್ಲಿ ಶುಕ್ರವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ.

ಕಾಲೇಜಿನ ವಿದ್ಯಾರ್ಥಿ ವಸತಿ ನಿಲಯಕ್ಕೆ ಹಳೆಯ ವಿದ್ಯಾರ್ಥಿಗಳು, ಅವರೊಂದಿಗೆ ಕೆಲ ಹೊರಗಿನ ವ್ಯಕ್ತಿಗಳು ಅತಿಕ್ರಮ ಪ್ರವೇಶ ಮಾಡಿದಾಗ ವಸತಿ ನಿಲಯದ ವಾರ್ಡನ್ ಆಕ್ಷೇಪಿಸಿ ಹೊರಹಾಕಲು ಮುಂದಾದಾಗ ಗಲಾಟೆ ಶುರುವಾಯಿತು ಎನ್ನಲಾಗಿದೆ.

ಈ ವೇಳೆ ಸ್ಥಳಕ್ಕೆ ಧಾವಿಸಿದ ತಿಲಕ್ ಪಾರ್ಕ್ ಠಾಣೆ ಪೊಲೀಸರು ಹಳೆಯ ವಿದ್ಯಾರ್ಥಿಗಳು, ಹೊರಗಿನ ವ್ಯಕ್ತಿಗಳನ್ನು ಕಾಲೇಜಿನ ಆವರಣದಿಂದ ಹೊರ ಹಾಕಿದರು ಎಂದು ತಿಳಿದಿದೆ. ಆದರೆ ಈ ಕುರಿತು ತಿಲಕ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ಪ್ರಾಂಶುಪಾಲರ ಹೇಳಿಕೆ: ಕಾಲೇಜಿನ ವಿದ್ಯಾರ್ಥಿ ನಿಲಯದ ವಸತಿ ನಿಲಯದಲ್ಲಿ ಗಲಾಟೆ ಏನೂ ಆಗಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ವೀರಯ್ಯ ಪ್ರಜಾವಾಣಿಗೆ ತಿಳಿಸಿದರು.

 

ಪ್ರತಿಕ್ರಿಯಿಸಿ (+)