ಸೋಮವಾರ, ಸೆಪ್ಟೆಂಬರ್ 16, 2019
22 °C

19ರಿಂದ ಓಣಿಚೌಡೇಶ್ವರಿ ದೇಗುಲ ಪ್ರಾರಂಭೋತ್ಸವ

Published:
Updated:
Prajavani

ಹುಳಿಯಾರು: ಹೋಬಳಿಯ ಯರೇಹಳ್ಳಿ ಸಮೀಪದ ದೊಡ್ಡನಹಟ್ಟಿ ಗ್ರಾಮದ ಓಣಿ ಚೌಡೇಶ್ವರಿ (ಓಣಿಅಮ್ಮ) ಅಮ್ಮನವರ ನೂತನ ದೇಗುಲ ಪ್ರಾರಂಭೋತ್ಸವ ಹಾಗೂ ವಿಗ್ರಹ ಪ್ರತಿಷ್ಠಾಪನೆ ಇದೆ 19 ಮತ್ತು 20ರಂದು ನಡೆಯಲಿದೆ.

19ರಂದು ಗಂಗಾಪೂಜೆ, ಗೋಪೂಜೆ, ವಿಶ್ವಕ್ಷೇನ ಪೂಜೆ, ಭಲಿಹರಣ, ನವಗ್ರಹ ಹೋಮ ಸೇರಿದಂತೆ ವಿವಿಧ ಹೋಮ ಹವನ ನಡೆಯಲಿವೆ.

ಸಂಜೆ ಸಂಗೇನಹಳ್ಳಿ ಆಂಜನೇಯಸ್ವಾಮಿ, ದೊಡ್ಡನಹಟ್ಟಿ ದೊಡ್ಡಮ್ಮ ಮತ್ತು ಸಣ್ಣಮ್ಮ ದೇವಿ, ಬರಕನಹಾಳ್ ಕರಿಯಮ್ಮ ದೇವಿ, ದೊಡ್ಡಬಾಲದೇವರಹಟ್ಟಿ ಮಾಳಮ್ಮ ಮತ್ತು ಬಾಲಕೃಷ್ಣಸ್ವಾಮಿ, ಬರಕನಹಾಳ್ ತಾಂಡಾದ ಸೇವಾಲಾಲ್ ಮರಿಯಮ್ಮ ದೇವಿಯವರು ಬರಲಿದ್ದಾರೆ.

ನಂತರ ದೇಗುಲದ ಪ್ರಾರಂಭೋತ್ಸವದ ಕೈಂಕರ್ಯಗಳು ನಡೆಯಲಿವೆ. 20ರಂದು ಧಾರ್ಮಿಕ ಸಭೆ, ಬೇವಿನಹಳ್ಳಿ ಬಸವರಾಜು ಮತ್ತು ತಂಡದವರಿಂದ ರಾತ್ರಿ ಶನಿ ಪ್ರಭಾವ ಅಥವಾ ಮಹಾಂದಾತಾ ಚಕ್ರವರ್ತಿ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ದೇಗುಲ ಸಮಿತಿಯವರು ತಿಳಿಸಿದ್ದಾರೆ.

Post Comments (+)