ನಾಗರಿಕ ಬಂದೂಕು ತರಬೇತಿ ಸಮಾರೋ‍ಪ

7

ನಾಗರಿಕ ಬಂದೂಕು ತರಬೇತಿ ಸಮಾರೋ‍ಪ

Published:
Updated:
Deccan Herald

ತುಮಕೂರು: ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದ 55ನೇ ನಾಗರಿಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭ ಶನಿವಾರ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಡಾ.ದಿವ್ಯಾ ಗೋಪಿನಾಥ್ ಅವರು ತರಬೇತಿಯಲ್ಲಿ ಪ್ರಥಮ ಪ್ರಶಸ್ತಿ ಪಡೆದ ತಿಪಟೂರಿನ ಶಮಂತ್‌ಕುಮಾರ್‌ಗೆ ಬಹುಮಾನ ವಿತರಿಸಿದರು.

ನಾಗರಿಕ ಬಂದೂಕುಗಳನ್ನು ಯಾವ ಯಾವ ಸಮಯದಲ್ಲಿ ಬಳಕೆ ಮಾಡಬೇಕು. ಬಂದೂಕು ತರಬೇತಿ ಪಡೆದವರು ಪೊಲೀಸ್ ಇಲಾಖೆಯೊಂದಿಗೆ ಹೇಗೆ ಇರಬೇಕು ಎಂಬುದರ ಬಗ್ಗೆ ಎಸ್ಪಿ ಮನವರಿಕೆ ಮಾಡಿಕೊಟ್ಟರು.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿಎಸ್‌ಪಿ ಮಂಜುನಾಥ್, ಆರ್‌ಪಿಐ ಪ್ರಶಾಂತ್, ಶಸ್ತ್ರಾಗಾರದ ನಾಗರಾಜ್, ಕುಮಾರ್ ಇದ್ದರು.

13 ದಿನಗಳ ಕಾಲ ನಡೆದ ತರಬೇತಿಯಲ್ಲಿ 90 ನಾಗರಿಕರು ಭಾಗವಹಿಸಿದ್ದರು. ಆಯುಧಗಳನ್ನು ಹೇಗೆ ಉಪಯೋಗಿಸಬೇಕು, ಗುರಿ ಅಭ್ಯಾಸ, ಆಯುಧಗಳ ಸುರಕ್ಷತೆ ಮತ್ತು ಸ್ವಚ್ಛತೆ ಬಗ್ಗೆ ತಿಳಿಸಿಕೊಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !