ತುರುವೇಕೆರೆ: ಬೆಲೆ ಏರಿಕೆ ನಡುವೆಯೂ ಗ್ರಾಹಕರು ವರಮಹಾಲಕ್ಷ್ಮಿ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಲಗುಬಗೆಯಿಂದ ಗುರುವಾರ ಖರೀದಿಸಿದರು.
ತಾಲ್ಲೂಕು ಕಚೇರಿ ವೃತ್ತ, ಬಿರ್ಲಾ ವೃತ್ತ, ಮಾಯಸಂದ್ರ, ಬಾಣಸಂದ್ರ, ತಿಪಟೂರು ಮತ್ತು ದಬ್ಬೇಘಟ್ಟ ರಸ್ತೆಗಳಲ್ಲಿ ಸಾವಿರಾರು ವ್ಯಾಪಾರಿಗಳು ವ್ಯಾಪಾರದಲ್ಲಿ ತೊಡಗಿದ್ದರು.
ಬಾಳೆ ಹಣ್ಣು ಕೆ.ಜಿ ₹170, ಸೇವಂತಿಗೆ, ಬಟನ್ಸ್, ಕನಕಾಂಬರ ಸೇರಿದಂತೆ ವಿವಿಧ ಬಗೆಯ ಹೂವುಗಳು ಒಂದು ಮಾರಿಗೆ ₹190ರಿಂದ ₹200ರವರೆಗೆ ಬಿಕರಿಯಾಯಿತು. ತುಳಿಸಿ ಹಾಗೂ ಹೂವಿನ ಹಾರಗಳು ದುಬಾರಿಯಾಗಿದ್ದವು.
ಸೇಬು, ಕಿತ್ತಲೆ, ಸೀಬಿಕಾಯಿ, ಕಮಲ, ಬಾಳೆ ಕಂದು, ತುಳಸಿ ಹಾರಗಳನ್ನು ವ್ಯಾಪಾರಿಗಳು ಹಬ್ಬದ ಬೇಡಿಕೆಗೆ ಅನುಗುಣವಾಗಿ ತರಹೇವಾರಿಯಾಗಿ ಮಾರಿದರು.
ಈ ಬಾರಿ ಮಳೆಯಿಲ್ಲದೆ ಕೆರೆಕಟ್ಟೆಗಳು ಬತ್ತಿರುವುದರಿಂದ ತಾವರೆ ಅಥವಾ ಕಮಲದ ಹೂವಿಗೆ ಬೇಡಿಕೆ ಹೆಚ್ಚಿತ್ತು. ಬೆಳ್ಳಿ, ದಿನಸಿ, ಬಟ್ಟೆ, ಸಿಹಿ, ಒಡವೆ ಅಂಗಡಿಯಲ್ಲಿ ಜನಸಂದಣಿ ಹೆಚ್ಚಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.