ಸೋಮವಾರ, ಅಕ್ಟೋಬರ್ 21, 2019
23 °C

ವೇದಗಳಿಂದ ಲೋಕಕಲ್ಯಾಣ, ಮಾನವರಿಗೆ ಹಿತ

Published:
Updated:
Prajavani

ತುಮಕೂರು: ವೇದಗಳು ಭಾರತೀಯ ಸಂಸ್ಕೃತಿಗೆ ಆಧಾರ. ವೇದಗಳಲ್ಲಿನ ವಿಷಯಗಳು ಲೋಕ ಕಲ್ಯಾಣ ಮತ್ತು ಮಾನವರಿಗೆ ಹಿತ ಬಯಸುತ್ತವೆ ಎಂದು  ಬೆಂಗಳೂರಿನ ಅರಬಿಂದೋ ಕಪಾಲಿಶಾಸ್ತ್ರಿ ವೇದ ಸಂಸ್ಕೃತಿ ಸಂಸ್ಥೆ ವ್ಯವಸ್ಥಾಪಕ ಡಾ.ರ.ವಿ.ಜಹಗೀರದಾರ ಹೇಳಿದರು.

ನಗರದ ಗಾಯತ್ರಿ ಸಮುದಾಯ ಭವನದಲ್ಲಿ ಸಂಸ್ಥೆಯಿಂದ ನಡೆದ ‘ವೇದಜ್ಞಾನ ಕಾರ್ಯಾಗಾರ’ದಲ್ಲಿ ಮಾತನಾಡಿದರು.

ವೇದವು ಜಾತಿ-ಮತ-ಕುಲ-ಲಿಂಗ ಭೇದ ಪ್ರತಿಪಾದಿಸುವುದಿಲ್ಲ. ಜೀವನದ ಪ್ರತಿ ಕ್ಷೇತ್ರದಲ್ಲೂ ಎಲ್ಲರೂ ಪರಿಪೂರ್ಣತೆ ಸಾಧಿಸಬೇಕು. ಲೌಕಿಕ ಮತ್ತು ಅಧ್ಯಾತ್ಮ ಜೀವನದ ನಡುವೆ ಕಂದಕ ಇಲ್ಲದೆ ತಾಳಮೇಳ ಇರಬೇಕು ಎಂಬುದೇ ವೇದಗಳ ನಿತ್ಯ ಸಂದೇಶ ಎಂದು ವಿವರಿಸಿದರು.

ವೇದದಲ್ಲಿ ಶರೀರಕ್ಕೆ ಅಗತ್ಯವಾದ ಆರೋಗ್ಯ ಇದೆ. ಮನಸ್ಸಿಗೆ ಬೇಕಾದ ಶಾಂತಿ ಇದೆ. ಆತ್ಮಕ್ಕೆ ಅಗತ್ಯವಾದ ಏಕಾಂತ ಇದೆ. ಒಟ್ಟಾರೆ ವೇದ ಎಲ್ಲರಿಗೂ ಬೇಕಾದುದು ಎಂದು ಪ್ರತಿಪಾದಿಸಿದರು.

 ’ವೇದ ದೇವತೆ’ಗಳ ಬಗ್ಗೆ ಎನ್.ನಾಗೇಂದ್ರ ಉಪನ್ಯಾಸ ನೀಡಿದರು. ಮಹಾನಗರ ಪಾಲಿಕೆ ಸದಸ್ಯ ಸಿ.ಎನ್.ರಮೇಶ್, ಯೋಗ ಶಿಕ್ಷಕ ಎಂ.ಕೆ.ನಾಗರಾಜರಾವ್ ವೇದಿಕೆಯಲ್ಲಿ ಇದ್ದರು.

ತುಮಕೂರು, ಶಿರಾ, ಮಧುಗಿರಿ, ಕೊರಟಗೆರೆ, ತಿಪಟೂರಿನಿಂದ 54 ಜನ ಪುರೋಹಿತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Post Comments (+)