ಮಾಟ ಮಂತ್ರ ಮಾಡಿಸಿ ಅಧಿಕಾರಕ್ಕೆ ಬರುವ ಮನಸ್ಥಿತಿ ಯಡಿಯೂರಪ್ಪಗಿಲ್ಲ: ವಿಜಯೇಂದ್ರ

7

ಮಾಟ ಮಂತ್ರ ಮಾಡಿಸಿ ಅಧಿಕಾರಕ್ಕೆ ಬರುವ ಮನಸ್ಥಿತಿ ಯಡಿಯೂರಪ್ಪಗಿಲ್ಲ: ವಿಜಯೇಂದ್ರ

Published:
Updated:

ತುಮಕೂರು: ‘ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ‍್ರಯತ್ನಿಸುತ್ತಿಲ್ಲ. ಆಪರೇಷನ್ ಕಮಲ ಎನ್ನುವುದು ಕಾಂಗ್ರೆಸ್ ಪಕ್ಷವೇ ಸೃಷ್ಟಿಸಿರುವ ಸುಳ್ಳುಗಳ ಭೂತ’ ಎಂದು ಬಿಜೆಪಿ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ನ ಕೆಲವು ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಭಿನ್ನಮತ ಚಟುವಟಿಕೆ ನಡೆಸಿದರೆ ಸರ್ಕಾರ ಬೀಳುತ್ತದೆ ಎಂದು ಜೆಡಿಎಸ್‌ ಮುಖಂಡರನ್ನು ಬೆದರಿಸಲು ಅವರು ‘ಆಪರೇಷನ್ ಕಮಲ’ ಎನ್ನುವ ಬೆದರುಗೊಂಬೆ ಸೃಷ್ಟಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಆಪರೇಷನ್ ಕಮಲ ಎನ್ನುವ ಸುಳ್ಳಿನ ಹಿಂದೆ ರಾಜ್ಯ ಕಾಂಗ್ರೆಸ್‌ನ ಮೂವರು ಮುಖಂಡರು ಇದ್ದಾರೆ. ಅವರು ಯಾರು ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ’ ಎಂದರು. 

‘ವಾಮಾಚಾರ, ಮಾಟ ಮಂತ್ರ ಮಾಡಿಸಿ ಅಧಿಕಾರ ಹಿಡಿಯುವ ಮನಸ್ಥಿತಿಯನ್ನು ಯಡಿಯೂರಪ್ಪ ಅವರು ಹೊಂದಿಲ್ಲ. ಈ ರೀತಿಯ ಸುದ್ದಿಗಳನ್ನು ಬಿತ್ತರಿಸುವುದು ಯಡಿಯೂರಪ್ಪ ಅವರಿಗೆ ಮತ್ತು ಅವರ ಹೋರಾಟಕ್ಕೆ ಮಾಡುವ ಅಪಮಾನ. ಆರೋಗ್ಯ ಸುಧಾರಣೆಗಾಗಿ ಕೇರಳಕ್ಕೆ ಅವರು ಹೋಗಿದ್ದರು’ ಎಂದು ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !