ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಹಕ್ಕು ದಬ್ಬಾಳಿಕೆಯಿಂದ ಹೊರಬರುವ ಅಸ್ತ್ರವಾಗಲಿ: ಎ.ನರಸಿಂಹಮೂರ್ತಿ

ಅಧ್ಯಯನ ಶಿಬಿರ
Last Updated 25 ಮಾರ್ಚ್ 2019, 10:34 IST
ಅಕ್ಷರ ಗಾತ್ರ

ತುಮಕೂರು: ಮತದಾನದ ಹಕ್ಕನ್ನು ದೌರ್ಜನ್ಯ, ಶೋಷಣೆ, ದಬ್ಬಾಳಿಕೆಯಿಂದ ಹೊರಬರುವ ಅಸ್ತ್ರವಾಗಿ ಬಳಸಬೇಕು ಎಂದು ಸ್ಲಂ ಜನಾಂದೋಲನಾ- ಕರ್ನಾಟಕದ ರಾಜ್ಯ ಘಟಕದ ಸಂಚಾಲಕ ಎ.ನರಸಿಂಹಮೂರ್ತಿ ತಿಳಿಸಿದರು.

ನಗರದ ವಂಚಿತ ಸಂಪನ್ಮೂಲ ಕೇಂದ್ರದಲ್ಲಿ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ‘ವಂಚಿತ ಸಮುದಾಯಗಳು ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ಉಳಿವಿಗಾಗಿ ನಮ್ಮ ಮತ’ ಎಂಬ ವಿಷಯ ಕುರಿತು ಏರ್ಪಡಿಸಿದ್ದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದಿಂದ ಮಾತ್ರ ಶೋಷಿತರ ರಕ್ಷಣೆ ಸಾಧ್ಯ. ಆದರೆ, ಇತ್ತೀಚಿಗೆ ಅದನ್ನು ನಾಶಪಡಿಸುವ ಉನ್ನಾರ ನಡೆಯುತ್ತಿದೆ. ಹಾಗಾಗಿ ಮತದಾನವು ಬದಲಾವಣೆಯ ಅಸ್ತ್ರವಾಗಿ ಬಳಸುವುದರ ಮುಖಾಂತರ ನಮ್ಮ ವಿಮೋಚನೆಗಾಗಿ ಬಳಸಬೇಕು ಎಂದು ಕರೆ ನೀಡಿದರು.

ಕೊಳಗೇರಿ ಸಮಿತಿ ಉಪಾಧ್ಯಕ್ಷ ದೀಪಿಕಾ, ಕಾರ್ಯದರ್ಶಿ ಶೆಟ್ಟಾಳಯ್ಯ, ಮಾರಿಯಮ್ಮ ನಗರದ ಅಟೇಕರ್, ಕಣ್ಣನ್, ಮುರು, ಕೃಷ್ಣ, ರಾಜು, ಕಾಶಿರಾಜು, ಹೆಳ್ಳಾರ ಬಂಡೆಯ ಜಬೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT