ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಸಂರಕ್ಷಿಸಿ; ಸಮಸ್ಯೆ ತಡೆಯಿರಿ

ಭಾರತದ ಸ್ವಾತಂತ್ರ್ಯ ಸಂಗ್ರಾಮ ನಡೆದು ಬಂದ ದಾರಿ ಹಾಗೂ ಜಲಶಕ್ತಿ ಅಭಿಯಾನ ಕುರಿತು ಉಪನ್ಯಾಸ
Last Updated 7 ಸೆಪ್ಟೆಂಬರ್ 2019, 13:35 IST
ಅಕ್ಷರ ಗಾತ್ರ

ತುಮಕೂರು: ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಮಳೆ ನೀರು ರಕ್ಷಿಸಿದರೆ ಮಾತ್ರ ಭವಿಷ್ಯದ ನೀರಿನ ಸಮಸ್ಯೆ ತಡೆಯಲು ಸಾಧ್ಯ ಎಂದು ಸರ್ವೋದಯ ಮಂಡಲದ ಜಿಲ್ಲಾ ಅಧ್ಯಕ್ಷ ಎಂ.ಬಸವಯ್ಯ ತಿಳಿಸಿದರು.

ನಗರದ ಸಿದ್ಧಗಂಗಾ ಪಿಯು ಕಾಲೇಜಿನಲ್ಲಿ ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರದ ಸಹಯೋಗದಲ್ಲಿ ನಡೆದ ‘ಭಾರತದ ಸ್ವಾತಂತ್ರ್ಯ ಸಂಗ್ರಾಮ ನಡೆದು ಬಂದ ದಾರಿ ಹಾಗೂ ಜಲಶಕ್ತಿ ಅಭಿಯಾನ’ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಕೃಷಿ ಚಟುವಟಿಯಲ್ಲಿ ಒಣ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು. ಜಲಸಂಪನ್ಮೂಲ ಮನುಷ್ಯನ ದುರಾಸೆಯಿಂದ ಕಲುಷಿತವಾಗುತ್ತಿದೆ. ಪ್ರತಿಯೊಬ್ಬರೂ ನೀರಿನ ಮಿತ ಬಳಕೆ ಜೊತೆಗೆ ಅಂತರ್ಜಲ ಮರು ಪೂರಣಕ್ಕೆ ಮುಂದಾಗುವುದು ಅನಿವಾರ್ಯ ಎಂದರು.

ನೆಹರೂ ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ, ಯುವ ಕೇಂದ್ರವು ಯುವ ಸಮುದಾಯಕ್ಕೆ ಅನುಕೂಲವಾಗುವ, ಸ್ತ್ರೀ ಸಬಲೀಕರಣ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಯೋಜನೆಯ ಮಾಹಿತಿ ನೀಡುತ್ತಿದೆ. ಜಲಸಂರಕ್ಷಣೆ ಬಗ್ಗೆ ವಿಶೇಷ ಉಪನ್ಯಾಸ ಮತ್ತು ಶಿಬಿರಗಳನ್ನು ಆಯೋಜಿಸುತ್ತಿದೆ ಎಂದರು.

ಸಿದ್ಧಗಂಗಾ ಕಾಲೇಜಿನ ಪ್ರಾಂಶುಪಾಲರಾದ ಹೇಮಲತಾ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಮಹಾನ್ ನಾಯಕರ ಜೀವನವನ್ನು ಯುವಜನರು ಆದರ್ಶವಾಗಿಟ್ಟುಕೊಳ್ಳಬೇಕು. ನೀರಿನ ರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳು ತಮ್ಮ ಗ್ರಾಮಗಳಲ್ಲಿ ಅರಿವು ಮೂಡಿಸಬೇಕು ಎಂದರು.

ಡಾ.ಎಂ.ಪಿ.ವರ್ಷ ಜಲಸಂರಕ್ಷಣೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ನೆಹರೂ ಯುವ ಕೇಂದ್ರದ ಕಾರ್ಯಕ್ರಮ ಸಂಯೋಜಕ ಕೃಷ್ಣ, ಸರ್ವೋದಯ ಮಂಡಲದ ರಾಜ್ಯ ಘಟಕದ ಅಧ್ಯಕ್ಷ ಎಲ್.ನರಸಿಂಹಯ್ಯ, ಉಪನ್ಯಾಸಕರಾದ ಸಿ.ಲಿಂಗರಾಜಪ್ಪ, ನಾಗರಾಜು, ರಾಷ್ಟ್ರೀಯ ಯುವ ಸ್ವಯಂ ಸೇವಕರಾದ ಅನಿತಾ, ನಿರಂಜನ್ ನಾಯಕ್, ಚಂದನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT