ಭಾನುವಾರ, ಆಗಸ್ಟ್ 14, 2022
24 °C

ಬೋರನಕಣಿವೆ ಜಲಾಶಯಕ್ಕೆ ನೀರು: ಸಚಿವರ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಳಿಯಾರು: ಹೋಬಳಿಯ ಬೋರನ ಕಣಿವೆ ಜಲಾಶಯಕ್ಕೆ ಶಾಶ್ವತವಾಗಿ ನೀರು ಹರಿಸುವ ಯೋಜನೆ ರೂಪಿಸಲು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಗುರುವಾರ ವಿವಿಧ ಗ್ರಾಮಗಳ ಕೆರೆ ಸೇರಿದಂತೆ ಜಲಾಶಯಕ್ಕೆ ಸ್ವಾಭಾವಿಕವಾಗಿ ನೀರು ಹರಿಸುವ ಮಾರ್ಗಗಳ ಸ್ಥಳ ಪರಿಶೀಲಿಸಿದರು.

ಸಿಂಗದಹಳ್ಳಿ, ಮದನಮಡು, ಗಂಟೇನಹಳ್ಳಿ ಕೆರೆಗಳ ಮೂಲಕ ಸ್ವಾಭಾ
ವಿಕವಾಗಿ ನೀರು ಯೋಜನೆ ರೂಪಿಸಲು ಸಂಬಂಧಪಟ್ಟ ಎಂಜಿನಿಯರ್‌ಗಳ ಸಮಕ್ಷಮ ಸಮಾಲೋಚನೆ ನಡೆಸಿದರು.

ಮದನಮಡು ಹಾಗೂ ಗಂಟನಹಳ್ಳಿ ಕೆರೆಗಳು ಕಡಿಮೆ ಮಳೆಯಾದರೂ ಕೋಡಿ ಹರಿಯುತ್ತವೆ. ಈ ನೀರನ್ನು ಬೋರನಕಣಿವೆ ಜಲಾಶಯದ ಹಿನ್ನೀರು ಸೇರಿಸಲು ಸರ್ವೆ ಮಾಡುವಂತೆ ಎಂಜಿನಿಯರ್‌ಗಳಿಗೆ ತಾಕೀತು ಮಾಡಿದರು.

ನಂತರ ಮಾತನಾಡಿದ ಸಚಿವರು ಬೋರನಕಣಿವೆ ಜಲಾಶಯಕ್ಕೆ ವಿವಿಧ ಕೆರೆಗಳು ತುಂಬಿದ ನಂತರ ತುಂಬಿ ಹರಿಯುವ ನೀರು ಜಲಾಶಯ ಸೇರಬೇಕು. ಈಗಾಗಲೇ ಕೆಲ ಕೆರೆಗಳ ನೀರು ಹಿರಿಯೂರು ತಾಲ್ಲೂಕು ಗಾಯತ್ರಿ ಜಲಾಶಯ ಸೇರುತ್ತದೆ. ಎತ್ತಿನಹೊಳೆ ನೀರಾವರಿ ಯೋಜನೆ ಮೂಲಕ ತಿಮ್ಮನಹಳ್ಳಿ ಕೆರೆಗೆ ನೀರು ತುಂಬಲಿದ್ದು ನಂತರ ಇಲ್ಲಿಂದಲೇ ಬೋರನಕಣಿವೆಗೆ ಹರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕೇನಹಳ್ಳಿ ಈಶ್ವರ ದೇಗುಲದ ಬಳಿ ಮೂರು ಕೆರೆಗಳ ಸಂಗಮವಾಗುತ್ತದೆ. ಅಲ್ಲಿಂದ ಏತ ನೀರಾವರಿ ಮೂಲಕ ನೀರು ಹರಿಸಲು ಚಿಂತಿಸಲಾಗುತ್ತಿದೆ. ನೀರು ಹರಿಸಲು ಪೂರಕ ಕಾಲುವೆ ಅಥವಾ ಬೇರೆ ಯಾವ ವಿಧದಲ್ಲಿ ನೀರು ಹರಿಸಬೇಕು ಎಂಬ ಬಗ್ಗೆ ಸಂಬಂಧಪಟ್ಟ ನೀರಾವರಿ ಎಂಜಿನಿಯರ್‌ಗಳ ಜತೆ ಚರ್ಚೆ ನಡೆಸಲಾಗುವುದು ಎಂದರು.

ಸಣ್ಣ ನೀರಾವರಿ ಇಲಾಖೆಯ ಇಇ ನಾಗರಾಜು, ವಿವಿಧ ಗ್ರಾಮಗಳ ರೈತರು ಹಾಗೂ ಮುಖಂಡರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು