ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಜಿ+2 ಸಮುಚ್ಚಯಕ್ಕೆ ವಿರೋಧ

ಅಲೆಮಾರಿ ಬುಡಕಟ್ಟು ಮಹಾಸಭಾದ ರಾಮಕ್ಕ ಹೇಳಿಕೆ
Published : 3 ಆಗಸ್ಟ್ 2024, 15:16 IST
Last Updated : 3 ಆಗಸ್ಟ್ 2024, 15:16 IST
ಫಾಲೋ ಮಾಡಿ
Comments

ತುಮಕೂರು: ‘ಜಿ+2 ವಸತಿ ಸಮುಚ್ಚಯಕ್ಕೆ ಸ್ಥಳಾಂತರಿಸಿದರೆ ಹಂದಿ, ಕುರಿ, ಕೋಳಿ, ಮೇಕೆ ಸಾಗಾಣಿಕೆಗೆ ತೊಂದರೆಯಾಗುತ್ತದೆ. ಅಂತಹ ವಸತಿ ಸಮುಚ್ಚಯ ನಮಗೆ ಬೇಡ’ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ರಾಮಕ್ಕ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಅಲೆಮಾರಿ ಬುಡಕಟ್ಟು ಮಹಾಸಭಾದ ಸಭೆಯಲ್ಲಿ ಮಾತನಾಡಿ, ‘ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಹೊನ್ನೇನಹಳ್ಳಿ ಸರ್ವೇ 44ರಲ್ಲಿ ಅಲೆಮಾರಿಗಳಿಗೆ ವಸತಿ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ನಮ್ಮ ಸಹಮತವಿಲ್ಲ’ ಎಂದರು.

ನಾವು ನಗರವನ್ನು ಅವಲಂಬಿಸಿಲ್ಲ. ಆದರೆ ನಮ್ಮನ್ನು ನಗರ ಆವರಿಸುತ್ತ ಬರುತ್ತಿದೆ. 40 ವರ್ಷಗಳ ಹಿಂದೆ ಬದುಕು ಅರಸಿ ಬಂದಾಗ ಹೆಚ್ಚಿನ ಅಭಿವೃದ್ಧಿಯಾಗಿರಲಿಲ್ಲ. ನಾಗರಿಕ ಸಮಿತಿಗಳ ಒತ್ತಡ ಮತ್ತು ಜಾತಿ ತಾರತಮ್ಯದಿಂದ ನಮ್ಮನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಈ ಕೆಲಸ ಮಾಡಬಾರದು ಎಂದು ಒತ್ತಾಯಿಸಿದರು.

ಸ್ಲಂ ಸಮಿತಿ ಕಾರ್ಯದರ್ಶಿ ಅರುಣ್‌, ‘ಕಳೆದ 5 ವರ್ಷದಲ್ಲಿ ಯಾವುದೇ ಮನೆ ಮಂಜೂರು ಮಾಡಿಲ್ಲ. ಒಂಟಿ ಮಹಿಳೆಯರು, ಕೋವಿಡ್‌ನಿಂದ ಜೀವನ ಕಳೆದುಕೊಂಡವರು, ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡ ಮಹಿಳೆಯರನ್ನು ವಿಶೇಷ ವರ್ಗವೆಂದು ಪರಿಗಣಿಸಿ ಮಹಾನಗರ ಪಾಲಿಕೆ ಸಮೀಕ್ಷೆ ನಡೆಸುತ್ತಿದೆ. 1,450 ವಸತಿ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಇತ್ತ ಗಮನ ಹರಿಸಬೇಕು. ನಿವೇಶನ ವಂಚಿತರಿಗೆ ವಸತಿ ನೀಡದಿದ್ದರೆ ಶಾಸಕರ ಮನೆ ಮುಂದೆ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಮುಖಂಡರಾದ ನಾಗರಾಜು, ಚಿಕ್ಕಗಂಗಮ್ಮ, ಗೋವಿಂದ, ವೆಂಕಟೇಶ್‌, ಗೋಪಾಲಯ್ಯ, ಮಂಜಮ್ಮ, ನಾಗಮ್ಮ, ಕೃಷ್ಣಮೂರ್ತಿ, ಮನು, ನಂದೀಶ್‌ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT