ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಿಗೇನಹಳ್ಳಿ | ಆಧುನಿಕ ಶ್ರವಣಕುಮಾರನಿಗೆ ಗಡಿಯಲ್ಲಿ ಸ್ವಾಗತ

Last Updated 24 ಮೇ 2020, 6:53 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ (ತುಮಕೂರು ಜಿಲ್ಲೆ ಮಧುಗಿರಿ ತಾ): ತನ್ನ ತಾಯಿಯ ಆಸೆ ಪೂರೈಸುವ ಉದ್ದೇಶದಿಂದ ಮಗನೊಬ್ಬ ದೇಶದಲ್ಲಿರುವ ಪ್ರಖ್ಯಾತ ಪುಣ್ಯ ಕ್ಷೇತ್ರಗಳಲ್ಲಿನ ದೇವರ ದರ್ಶನ ಮಾಡಿಸಿ ಆಧುನಿಕ ಶ್ರವಣಕುಮಾರನೆನಿಸಿಕೊಂಡಿದ್ದಾರೆ.

ಮೂಲತಃ ಮೈಸೂರು ನಗರದ ಬಿ.ಇ. ಎಂಜಿನಿಯರಿಂಗ್ ಪದವಿಧರರಾದ ಕೃಷ್ಣಕುಮಾರ್ (42) ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಆದರೆ ತನ್ನ 70 ವರ್ಷದ ತಾಯಿ ಚೂಡಾರತ್ನ ಅವರ ಜೀವನದ ಕನಸನ್ನು ಈಡೇರಿಸುವ ಸಲುವಾಗಿ ತನ್ನ ಕೆಲಸಕ್ಕೆ ಸ್ವಯಂ ನಿವೃತ್ತಿ ಘೋಷಿಸಿತನ್ನ ತಾಯಿಯೊಂದಿಗೆ ಪುಣ್ಯ ಕ್ಷೇತ್ರಗಳ ದರ್ಶನಕ್ಕಾಗಿ ತಂದೆಯ ಹಳೆಯ ಬಜಾಜ್ ಸ್ಕೂಟರ್‌ನಲ್ಲಿ ಕಳೆದ 2018 ಜನವರಿ 14ರಂದು ಮೂಸೂರಿನಿಂದ ತನ್ನ ತಾಯಿಯೊಂದಿಗೆ ಸುಮಾರು 56,000 ಕೀಲೋ ಮೀಟರ್ ಪಯಣಿಸಿದ್ದಾರೆ.

ತಾಯಿ-ಮಗ ಉತ್ತರ ಭಾರತ, ನಾಗಲ್ಯಾಂಡ್, ಪಶ್ಚಿಮ ಬಂಗಾಳ, ಕೈಲಾಸ ಪರ್ವತ, ನೇಪಾಳ, ಮಾನಸ ಸರೋವರ, ಭೂತಾನ್, ಟಿಬೆಟ್ ಸೇರಿದಂತೆ ದೇಶದಲ್ಲಿನ ಪ್ರಸಿದ್ದ ದೇವಾಲಯ ಮತ್ತು ಸ್ಥಳಗಳಿಗೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ಇವರಿಬ್ಬರು ಶನಿವಾರ ಸಂಜೆ ಕರ್ನಾಟಕದ ಗಡಿ ಭಾಗವಾದ ಮಧುಗಿರಿ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದ ಚೆಕ್ ಪೋಸ್ಟ್ ಮೂಲಕ ರಾಜ್ಯಕ್ಕೆ ಪ್ರವೇಶಿಸಿ ತಮ್ಮ ನೆಚ್ಚಿನ ರಾಜ್ಯದ ಭೂಮಿ ತಾಯಿಗೆ ನಮಿಸಿದರು. ಈ ಸಂದರ್ಭದಲ್ಲಿ ಚೆಕ್‌ಪೋಸ್ಟ್‌ನಲ್ಲಿದ್ದ ವೈದ್ಯರಾದ ರಕ್ಷಿತಾ ಅವರಿಬ್ಬರನ್ನು ಆರೋಗ್ಯ ತಪಾಸಣೆ ನಡೆಸಿದರು.

ತಾಯಿ ಮತ್ತು ಮಗ ರಾಜ್ಯ ಪ್ರವೇಶಿಸುವ ಬಗ್ಗೆ ವಿಷಯ ತಿಳಿದ ತಹಶೀಲ್ದಾರ್ ಡಾ. ವಿಶ್ವನಾಥ್ ಹಾಗೂ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐಪಾಲಾಕ್ಷಪ್ರಭು ಅವರು ತಮ್ಮ ಸಿಬ್ಬಂದಿಗಳೊಂದಿಗೆ ಮುದ್ದೇನಹಳ್ಳಿ ಚೆಕ್‌ಪೋಸ್ಟ್‌ಗೆ ಬಂದುತಾಯಿ ಮತ್ತು ಮಗನನ್ನು ಸನ್ಮಾನಿಸಿ ಗೌರವಿಸಿದರು.

ವೈದ್ಯೆ ರಕ್ಷಿತಾ, ಆಹಾರ ಶಿರಸ್ತೆದಾರ ಗಣೇಶ್, ಪುರವರ ಕಂದಾಯಾಧಿಕಾರಿ ನಾರಾಯಣಪ್ಪ, ವಿ.ಎ. ಸುನೀಲ್, ಪೂರ್ಣಾನಂದಾ,ಪೊಲೀಸರು ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT