ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಡು ಸಂತಾನಕ್ಕೆ ಪತಿ ಕಿರುಕುಳ ಪುತ್ರಿಯರೊಂದಿಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

Published : 26 ಸೆಪ್ಟೆಂಬರ್ 2024, 15:31 IST
Last Updated : 26 ಸೆಪ್ಟೆಂಬರ್ 2024, 15:31 IST
ಫಾಲೋ ಮಾಡಿ
Comments

ಮಧುಗಿರಿ (ತುಮಕೂರು): ಗಂಡು ಸಂತಾನಕ್ಕಾಗಿ ಗಂಡ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ಗುರುವಾರ ತನ್ನ ಇಬ್ಬರು ಪುತ್ರಿಯರೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಟ್ಟಣದ ಒಂದನೇ ಬ್ಲಾಕ್‌ ನಿವಾಸಿ ಹಸೀನಾ (25), ಪುತ್ರಿಯರಾದ ಅಲ್ಫಿಯಾ ಕೊನೆನ್ (3), ಅಫಿಯ ಕೊನೆನ್ (8) ಜೊತೆ ಸಿದ್ಧಾಪುರದ ಕೆರೆಗೆ ಹಾರಿದ್ದಾರೆ.

ಹಸೀನಾ ಮತ್ತು ಮಹಮ್ಮದ್‌ ಶಫಿ ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ. ‘ಗಂಡು ಸಂತಾನಕ್ಕಾಗಿ ಶಫಿ, ಹಸೀನಾ ಜೊತೆ ಹಲವು ದಿನಗಳಿಂದ ಗಲಾಟೆ ಮಾಡುತ್ತಿದ್ದರು. ಬುಧವಾರ ರಾತ್ರಿ ಇದೇ ವಿಚಾರಕ್ಕೆ ದಂಪತಿ ಮಧ್ಯೆ ಗಲಾಟೆ ನಡೆದಿದೆ. ಗುರುವಾರ ಬೆಳಗ್ಗೆ ಮಕ್ಕಳಿಗೆ  ಯೂನಿಫಾರಂ ಹಾಕಿಸಿಕೊಂಡು ಶಾಲೆಗೆ ಬಿಡುವುದಾಗಿ ಹೇಳಿ ಮನೆಯಿಂದ ಹೊರಟ ಹಸೀನಾ ಇಬ್ಬರೂ ಪುತ್ರಿಯರೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಕೆರೆ ದಡದಲ್ಲಿದ್ದ ಪ್ರತ್ಯಕ್ಷದರ್ಶಿಯೊಬ್ಬ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವ ವೇಳೆಗೆ ಮೂವರೂ ಮೃತಪಟ್ಟಿದ್ದರು. ಶವಗಳನ್ನು ಹೊರ ತೆಗೆಯಲಾಗಿದೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಗಂಡು ಮಗು ಬೇಕು ಎಂದು ಗಂಡ ಆಗಾಗ ಗಲಾಟೆ ಮಾಡುತ್ತಿದ್ದ. ನನ್ನ ಸಾವಿಗೆ ಪತಿ ಮಹಮ್ಮದ್ ಶಫಿ ಕಾರಣ’ ಎಂದು ಹಸೀನಾ  ಬರೆದ ಡೆತ್‌ನೋಟ್ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT