ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾವಗಡ: ವಿದ್ಯುತ್ ತಗುಲಿ ಮಹಿಳೆ ಸಾವು

Published : 15 ಸೆಪ್ಟೆಂಬರ್ 2024, 3:30 IST
Last Updated : 15 ಸೆಪ್ಟೆಂಬರ್ 2024, 3:30 IST
ಫಾಲೋ ಮಾಡಿ
Comments

ಪಾವಗಡ: ತಾಲ್ಲೂಕಿನ ಕೊತ್ತೂರು ಗ್ರಾಮದಲ್ಲಿ ವಿದ್ಯುತ್ ತಗುಲಿ ತ್ರಿವೇಣಿ (23) ಶನಿವಾರ ಮೃತಪಟ್ಟಿದ್ದಾರೆ.

ನಿರ್ಮಾಣ ಹಂತದಲ್ಲಿರುವ ಮನೆ ಮೇಲೆ ಕಬ್ಬಿಣದ ರಾಡ್‌ಗಳನ್ನು ತೆಗೆದುಕೊಂಡು ಹೋಗುವಾಗ 11 ಕೆ.ವಿ. ವಿದ್ಯುತ್ ತಂತಿಗೆ ಕಂಬಿ ತಗುಲಿದೆ. ಮಹಿಳೆಗೆ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ದವಡಬೆಟ್ಟದ ಕೃಷ್ಣಮೂರ್ತಿ ಅವರನ್ನು ವಿವಾಹವಾಗಿದ್ದ ತ್ರಿವೇಣಿ ಮದುವೆಗೆಂದು ಕೊತ್ತೂರಿನ ತವರು ಮನೆಗೆ ತಿಂಗಳ ಹಿಂದೆ ಬಂದಿದ್ದರು. ಇವರಿಗೆ ಒಂದು ವರ್ಷದ ಹೆಣ್ಣು ಮಗು ಇದೆ.

ಅರಸೀಕೆರೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT