ತುಮಕೂರು: ‘ಜಿಲ್ಲೆಯಲ್ಲಿ ಬಾಣಂತಿ, ಮಗುವನ್ನು ಊರಿಂದ ಹೊರಗಿಡುವ ಮೌಢ್ಯಾಚರಣೆ ಇನ್ನೂ ಜೀವಂತವಾಗಿದೆ. ಯಾಕೆ ಅನಿಷ್ಟ ಪದ್ಧತಿ ತಡೆಯಲು ಆಗಿಲ್ಲ. ವೈಫಲ್ಯ ಆಗಿದ್ದು ಎಲ್ಲಿ, ಜಿಲ್ಲಾ ಆಡಳಿತವೇ ಕೈಕಟ್ಟಿ ಕೂತರೆ ಹೇಗೆ?’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅಧಿಕಾರಿಗಳಿಗೆ ಚಾಟಿ ಬೀಸಿದರು.

ನಗರದಲ್ಲಿ ಗುರುವಾರ ರಾಜ್ಯ ಮಹಿಳಾ ಆಯೋಗ, ಜಿಲ್ಲಾ ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ‘ಮಹಿಳಾ ಆಯೋಗ ನಿಮ್ಮ ಮನೆ ಬಾಗಿಲಿಗೆ’ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಮಹಿಳೆಯರಿಂದ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ.ಅಶ್ವಿಜ ಸೇರಿದಂತೆ ಪ್ರಮುಖ ಅಧಿಕಾರಿಗಳು ಸಭೆಗೆ ಗೈರಾಗಿದ್ದರು. ‘ಅಧಿಕಾರಿಗಳೇ ಇಲ್ಲದಿದ್ದರೆ ಸಭೆ ನಡೆಸುವುದು ಹೇಗೆ’ ಎಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಎರಡು ವರ್ಷಗಳಿಂದ ವರದಿ ಸಲ್ಲಿಸುವಂತೆ ಸೂಚಿಸಿದರೂ ಜಿಲ್ಲಾ ಆಡಳಿತದಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಹೊರ ಹಾಕಿದರು.

ತಾಯಂದಿರು, ಮಕ್ಕಳನ್ನು ಉಳಿಸುವುದು ಹೇಗೆ? ಪುಟ್ಟ ಮಗುವನ್ನು ಕರಡಿ ಹೊತ್ತುಕೊಂಡು ಹೋಗಿದ್ದನ್ನು ಯಾರೂ ಮರೆಯಬೇಡಿ. ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಹಟ್ಟಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮೌಢ್ಯ ಆಚರಿಸಿದರೆ ಕಾನೂನಿನ ಕ್ರಮ ಆಗುತ್ತದೆ ಎಂಬ ಭಯ ಹುಟ್ಟಿಸಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಬದಲಾವಣೆ ತರುವುದು ಹೇಗೆ? ಎಂದು ಪ್ರಶ್ನಿಸಿದರು.

‘ಚಿಕ್ಕನಾಯಕನಹಳ್ಳಿ ಹೊರವಲಯದ ಕೆರೆ ದಂಡೆಯಲ್ಲಿ ಹಲವು ವರ್ಷಗಳಿಂದ ಕೆಲ ಕುಟುಂಬಗಳು ವಾಸಿಸುತ್ತಿವೆ. ಅವರಿಗೆ ಶಾಶ್ವತ ನೆಲೆ ಕಲ್ಪಿಸಲು ಆಗಿಲ್ಲ. ಕೋಡಿ ಹರಿದಾಗ ಅವರನ್ನು ಸ್ಥಳಾಂತರ ಮಾಡಿ, ಮಳೆಗಾಲ ಮುಗಿದ ಮೇಲೆ ಮತ್ತೆ ಅಲ್ಲಿಗೆ ಕರೆದುಕೊಂಡು ಹೋಗಿ ಬಿಡುತ್ತಾರೆ. ನಾನೇ ಖುದ್ದಾಗಿ 10 ಸಲ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಜಿಲ್ಲಾಧಿಕಾರಿ ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಗುಡಿಸಲುಗಳಲ್ಲಿ ಹಾವುಗಳು ನೇತಾಡುತ್ತಿರುತ್ತವೆ. ಚೇಳು, ಹುಳು ಮಕ್ಕಳಿಗೆ ಕಚ್ಚುತ್ತಿವೆ. ಎರಡು ವರ್ಷದಿಂದ ಯಾವುದೇ ಬದಲಾವಣೆ ಆಗಿಲ್ಲ. ಇಂತಹ ಜಾಗದಲ್ಲಿ ನೀವು ವಾಸ ಮಾಡುತ್ತೀರಾ? ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಅವರನ್ನು ಪ್ರಶ್ನಿಸಿದರು. ಯಾವುದಕ್ಕೂ ಉತ್ತರಿಸಿದೆ ಮೌನವಾಗಿ ಕೂತಿದ್ದರು.

ಪ್ರತಿ ಗ್ರಾಮದಲ್ಲಿ ಕಡ್ಡಾಯವಾಗಿ ಮಹಿಳಾ ಗ್ರಾಮ ಸಭೆ ನಡೆಸಬೇಕು. ಸಭೆ ಮಾಡಿದರೆ ಅಲ್ಲಿಯೇ ಹಲವಾರು ಸಮಸ್ಯೆ ಬಗೆಹರಿಯುತ್ತವೆ. ಜಿಲ್ಲಾ ಹಂತದ ವರೆಗೆ ಬರುವುದಿಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಜಿ.ಪಂ ಉಪ ಕಾರ್ಯದರ್ಶಿ ಈಶ್ವರಪ್ಪ, ಮಹಾನಗರ ಪಾಲಿಕೆ ಆಯುಕ್ತೆ ಬಿ.ಶುಭ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಲ್.ಪುರುಷೋತ್ತಮ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್.ಸಿದ್ದರಾಮಣ್ಣ, ಡಿವೈಎಸ್ಪಿ ಶೇಖರ್, ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ ಇತರರು ಹಾಜರಿದ್ದರು.

ಪೊಲೀಸ್ ಇಲಾಖೆ ವಿಫಲ

‘ಗಂಡನ ಮನೆಯ ಕಿರುಕುಳದಿಂದ ಮಗಳು ಇಬ್ಬರು ಮೊಮ್ಮಕ್ಕಳು ಕಳೆದ ಸೆಪ್ಟೆಂಬರ್ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಈವರೆಗೆ ಮರಣೋತ್ತರ ಪರೀಕ್ಷೆಯ ವರದಿ ನಮಗೆ ಸಿಕ್ಕಿಲ್ಲ. ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಪಾವಗಡದ ಕಾಂತಮ್ಮ ತಮ್ಮ ಸಮಸ್ಯೆ ಹೇಳಿಕೊಂಡರು.

‘ಘಟನೆ ನಡೆದು 6 ತಿಂಗಳು ಕಳೆದರೂ ನೊಂದ ಕುಟುಂಬಕ್ಕೆ ಮರಣೋತ್ತರ ಪರೀಕ್ಷೆಯ ವರದಿ ಕೊಟ್ಟಿಲ್ಲ ಯಾಕೆ ಪೊಲೀಸ್ ಇಲಾಖೆ ವಿಫಲವಾಗುತ್ತಿದೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ’ ಎಂದು ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಎಚ್ಚರಿಸಿದರು. ಅಗತ್ಯ ಇರುವ ಮಹಿಳೆಯರಿಗೆ ಪೊಲೀಸರು ರಕ್ಷಣೆ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ಪ್ರಕರಣ ಮುಂದುವರಿಸುವ ಕುರಿತು ಮಾರ್ಗದರ್ಶನ ನೀಡಬೇಕು. ಪ್ರಕರಣ ದಾಖಲಾದ ನಂತರವೂ ಆರೋಪಿಗಳು ಸಂತ್ರಸ್ತರಿಗೆ ಕಿರುಕುಳ ಕೊಟ್ಟರೆ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ಸಖಿ ಕೇಂದ್ರ ಮುಚ್ಚದಂತೆ ಪತ್ರ

ಸಾಂತ್ವನ ಕೇಂದ್ರ ಸಖಿ ಕೇಂದ್ರಗಳಿಂದ ಮಹಿಳೆಯರಿಗೆ ತಾಯಂದಿರಿಗೆ ಸಹಾಯವಾಗುತ್ತಿದೆ. ಈ ಕೇಂದ್ರಗಳನ್ನು ಮುಚ್ಚದಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು. ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಭೆಯಲ್ಲಿ ಹನುಮಂತಪುರದ ನಾಗಮಣಿ ಎಂಬುವರ 3 ತಿಂಗಳ ಮಗುವಿಗೆ ಚಿರಾಗ್ ಎಂದು ಆಯೋಗದ ಅಧ್ಯಕ್ಷರು ನಾಮಕರಣ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.