ವೈ.ಎನ್.ಹೊಸಕೋಟೆ (ಪಾವಗಡ):ತಾಲ್ಲೂಕಿನ ವೈ.ಎನ್. ಹೋಸಕೋಟೆಯಲ್ಲಿ ಶನಿವಾರ ಚೌಡೇಶ್ವರಿ ಜ್ಯೋತಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಯುಗಾದಿ 3ನೇ ದಿನದಂದು ಚೌಡೇಶ್ವರಿ ದೇವಿಯ ಜ್ಯೋತಿಗಳ ಮೆರವಣಿಗೆಯನ್ನು ಗ್ರಾಮದ ಬೀದಿಗಳಲ್ಲಿ ನಡೆಸುವುದು ವಾಡಿಕೆ. ವಾದ್ಯವೃಂದ, ಕಲಾತಂಡಗಳೊಂದಿಗೆಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಗ್ರಾಮದ ಒಳಿತಿಗಾಗಿ ತೊಗಟವೀರ ಕ್ಷತ್ರಿಯ ಸಮುದಾಯದವರು ಕುಲದೇವಿ ಚೌಡೇಶ್ವರಿ ಉತ್ಸವ ಮೂರ್ತಿ, ಕಳಸ, ಭಾನ, ಜ್ಯೋತಿಗಳೊಂದಿಗೆ ಪುರದಕಟ್ಟೆಯಿಂದ, ಬಿ.ಎಚ್. ರಸ್ತೆಯ ಮೂಲಕ ಸಾಗಿ ಹಳೆಯ ಅಂಚೆಕಚೇರಿ ರಸ್ತೆ, ಎಸ್ಕೆಪಿಟಿ ರಸ್ತೆಯ ಮೂಲಕ ಅಶ್ವಥನಕಟ್ಟೆ ರಸ್ತೆಯಲ್ಲಿ ಸಾಗಿ ಚೌಡೇಶ್ವರಿ ದೇವಾಲಯದವರೆಗೆ ಮೆರವಣಿಗೆ ನಡೆಸಿದರು.

ಭಕ್ತರು ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದರು. ಜ್ಯೋತಿ ಹಾದುಬರುವ ದಾರಿಯುದ್ದಕ್ಕೂ ಶಾಮಿಯಾನ ಹಾಕಿಸಿ, ಮಜ್ಜಿಗೆ, ಷರಬತ್, ಪ್ರಸಾದ ವಿತರಿಸಿದರು. ಜೋಡಿ ಅಚ್ಚಮ್ಮನಹಳ್ಳಿಕಲಾವಿದರ ಕೋಲಾಟ, ಸಿದ್ಧಾಪುರ ಕಲಾವಿದರ ಡ್ರಮ್ಸ್ ಆಕರ್ಷಕವಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-17-227948297

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.