ಕುಣಿಗಲ್: ತಾಲ್ಲೂಕಿನ ಎಡೆಯೂರು ಸಿದ್ದಲಿಗೇಶ್ವರ ಜಾತ್ರೆ ಪ್ರಾರಂಭವಾಗುತ್ತಿದ್ದಂತೆ ರಾಸುಗಳ ಜಾತ್ರೆ ಸಹ ಚುರುಕಾಗುತ್ತಿದೆ. ಸುಮಾರು 2,500 ಜೋಡಿ ರಾಸುಗಳು ಮಾಲೀಕರೊಂದಿಗೆ ಬೀಡು ಬಿಟ್ಟಿದ್ದು ಯಾತ್ರಿಕರ, ರೈತರ ಗಮನ ಸೆಳೆಯುತ್ತಿದೆ.

ಎಡೆಯೂರು ಜಾತ್ರೆ ಪ್ರಾರಂಭವಾದ ದಿನದಿಂದಲೂ ರಾಸುಗಳ ಪ್ರದರ್ಶನ, ಮಾರಾಟ ನಿರಂತರವಾಗಿ ಸಾಗುತ್ತಿದೆ. ಉತ್ತಮ ರಾಸುಗಳಿಗೆ ಪಶು ಸಂಗೋಪನಾ ಇಲಾಖೆಯಿಂದ ಬಹುಮಾನ ವಿತರಣೆ ಮಾಡಲಾಗುತ್ತಿದೆ. ದೇವಾಲಯದ ಒಂದು ಭಾಗದಲ್ಲಿ ಸಂಪೂರ್ಣವಾಗಿ ರಾಸುಗಳಿಗೆ ಮೀಸಲಾಗಿಟ್ಟಿದ್ದು, ರಾಸುಗಳಿಗೆ ಮೇವು, ನೀರಿಗೆ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಪಶು ಪಾಲನಾ ಇಲಾಖೆ ರಾಸುಗಳ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದೆ.

ನಾಗಮಂಗಲ, ಕೆ.ಆರ್.ಪೇಟೆ, ಶ್ರವಣಬೆಳಗೊಳ, ಮಂಡ್ಯ, ಮದ್ದೂರು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಹಳ್ಳಿಕಾರ್ ತಳಿ ರಾಸುಗಳ ಪ್ರದರ್ಶನ, ಮಾರಾಟ ಭರದಿಂದ ಸಾಗುತ್ತಿದೆ. ಈಗಾಗಲೇ 300ಕ್ಕೂ ಹೆಚ್ಚು ಜೋಡಿಗಳು ಮಾರಾಟವಾಗಿವೆ.

ತುರುವೇಕೆರೆ ಮಲ್ಲೆದೇವನಹಟ್ಟಿ ವೀರಭದ್ರಪ್ಪ ಮತ್ತು ನಾಗಮಂಗಲ ಕಾಳಿಂಗನಹಳ್ಳಿ ಕೃಷ್ಣಮೂರ್ತಿ ಅವರಿಗೆ ಸೇರಿದ ಜೋಡೆತ್ತುಗಳು ₹15 ಲಕ್ಷಕ್ಕೆ ಮಾರಾಟಕ್ಕಿದ್ದರೆ, ಗುಬ್ಬಿ ತಾಲ್ಲೂಕಿನ ಇಡಗೂರಿನ ಸುಶಾಂತ್ ಅವರಿಗೆ ಸೇರಿದ ಜೋಡೆತ್ತು ₹22 ಲಕ್ಷಕ್ಕೆ ಮಾರಾಟಕ್ಕಿದ್ದು ಗಮನ ಸೆಳೆಯುತ್ತಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-17-580686315

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.