ಹಿಂದು ಉಳಿವಿಗಾಗಿ ಯುವ ಜನರು ಸಂಘಟಿತರಾಗಿ

7
ವಿಶ್ವ ಹಿಂದು ಯುವಕ-ಯುವತಿಯರ ಯುವ ಹಿಂದು ಶೋಭಯಾತ್ರೆ

ಹಿಂದು ಉಳಿವಿಗಾಗಿ ಯುವ ಜನರು ಸಂಘಟಿತರಾಗಿ

Published:
Updated:
ನಗರದ ವಿವಿಧ ಬೀದಗಳ ಮೂಲಕ ಹಾದು ಬಂದ ವಿಶ್ವ ಹಿಂದು ಯುವಕ-ಯುವತಿಯರ ಯುವ ಹಿಂದು ಶೋಭಯಾತ್ರೆ

ತುಮಕೂರು: ಹಿಂದು ಸಮಾಜದ ಉಳಿವಿಗಾಗಿ ಯುವ ಜನರು ಸಂಘಟಿತರಾಗಿ ಹಿಂದು ಧರ್ಮವನ್ನು ಪ್ರಚುರ ಪಡಿಸುವ ಕೆಲಸ ಮಾಡಬೇಕಿದೆ ಎಂದು ಅಖಿಲ ಭಾರತ ಭಜರಂಗದಳದ ಸಂಯೋಜನಕ ಸತ್ಯನಾರಾಯಣ ತಿಳಿಸಿದರು.

ನಗರದ ಮಹಾನಗರ ಪಾಲಿಕೆಯಲ್ಲಿ ಯುವ ಹಿಂದು ಶೋಭಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದು ಧರ್ಮದ ಸಂಸ್ಕೃತಿ, ಪರಂಪರೆಯನ್ನು ತಿಳಿದುಕೊಳ್ಳುವಂತಹ ಪರಿಸ್ಥಿತಿ ಇಂದಿನ ಯುವ ಜನರಲ್ಲಿದೆ ಎಂದು ವಿಷಾಧ ವ್ಯಕ್ತಪಡಿಸದರು. 

ಇತಿಹಾಸದಲ್ಲಿ ಹಿಂದು ಸಮಾಜದಿಂದ ಎಂದೂ ಕೋಮುಗಲಭೆ, ಭಯೋತ್ಪಾದನೆ ಕೃತ್ಯಗಳನ್ನು ಮಾಡಿಲ್ಲ. ಅಂತಹ ಶ್ರೇಷ್ಠ ಧರ್ಮ ಹಿಂದು. ಹಾಗಾಗಿ ಒಂದು ಧರ್ಮದ ಪರವಾಗಿ ಹೋರಾಟವನ್ನು ಮಾಡುತ್ತಿಲ್ಲ. ದೇಶ ದ್ರೋಹ ಮಾಡುವವರ ವಿರುದ್ಧ, ಅವರನ್ನು ಹೊರದಬ್ಬುವ ಕೆಲಸವನ್ನು ಮಾಡಬೇಕು ಎಂಬುದಷ್ಟೇ ಎಂದು ತಿಳಿಸಿದರು.

ಭಜರಂಗದ ಉದ್ದೇಶ ಹಿಂದು ಧರ್ಮ ಭಾರತದಲ್ಲಿ ಇರಬೇಕೆಂಬದಲ್ಲ. ಎಲ್ಲ ಧರ್ಮವನ್ನು ಗೌರವಿಸಿ, ಎಲ್ಲರು ಸ್ನೇಹ ಭಾಂಧವ್ಯದಿಂದ ಇರಬೇಕು. ದೇ ದ್ರೋಹಿ, ಕೋಮುಗಲಭೆಗೆ ಪ್ರಚೋದನೆ ನೀಡುವ ದುರ್ದೈವಿಗಳಿಗೆ ಮಟ್ಟ ಹಾಕಬೇಕು ಎಂದು ತಿಳಿಸಿದರು. 

ವಿಶ್ವ ಹಿಂದು ಪರಿಷತ್ ನ ಪ್ರಾಂತೀಯ ಸಂಚಾಲಕ ಮಂಜುನಾತ ಮಾತನಾಡಿ, ರಾಜಕಾರಣವೇ ಸಮಾಜದ ಮಾರಕ. ರಾಜಕಾರಣಿಗಳೇ ಧರ್ಮ, ಜಾತಿ ಹೆಸರಿನಲ್ಲಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.  ಹಿಂದು ಧರ್ಮದಲ್ಲಿ ಜಾತಿ ಎಂಬ ಪದವೇ ಇಲ್ಲ. ಎಲ್ಲರು ಒಂದೇ ಎಂಬ ನಿಯಮವಿದೆ. ಹಾಗಾಗಿ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಭಾರತದಲ್ಲಿ ಇನ್ನೂ ಮುಂದೆ ಯಾವೊಂದು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆಗದಂತೆ ಯುವ ಜನರು ತಡೆಗಟ್ಟುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು. ಸಮಾರಂಭದಲ್ಲಿ ವಿಶ್ವ ಹಿಂದು ಪರಿಷತ್ ನ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ಶ್ರೀನಿವಾಸ, ಭಜರಂಗದಳದ ಜಿಲ್ಲಾ ಘಟಕದ ಸಹ ಸಂಚಾಲಕರಾದ ಎಚ್.ಎನ್.ಚಂದ್ರಶೇಖರ್, ರಘು ಸಕಲೇಶಪುರ, ಹರೀಶ್ ಇದ್ದರು.

ಅದ್ದೂರಿ ಶೋಭಯಾತ್ರೆ

ವಿಶ್ವ ಹಿಂದು ಯುವಕ-ಯುವತಿಯರ ಯುವ ಹಿಂದು ಶೋಭಯಾತ್ರೆಯು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಹೊರಟು ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಶ್ರೀರಾಮನಗರ, ಬಾರ್ ಲೈನ್ ರಸ್ತೆ ಮೂಲಕ ನಗರದ ಟೌನ್ ಹಾಲ್ ವೃತ್ತಕ್ಕೆ ಬಂದು ತಲುಪಿತು. ಯಾತ್ರೆಯಲ್ಲಿ ಯುವ ಜನರು ಭಾರತ್ ಮಾತಾ ಕೀ, ಜೈ ಹಿಂದು ಧರ್ಮ ಎಂದು ಜೈಕಾರ ಹಾಕಿದರು.

ನಗರದ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಎಂ.ಬಿ.ನಂದೀಶ ಪಾಲ್ಗೊಂಡಿದ್ದರು. ಶೋಭಯಾತ್ರೆಯ ಮನ್ನಚ್ಚರಿಕೆ ಕ್ರಮವಾಗಿ ನಗರ ಬಿ.ಎಚ್.ರಸ್ತೆಯಲ್ಲಿ ಮಾರ್ಗ ಬದಾವಣೆ ಮಾಡಲಾಗಿತ್ತು. ಅಲ್ಲದೆ ಯಾತ್ರೆಯ ಉದ್ದಕ್ಕೂ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !