ಯುಗಾದಿ ಹಬ್ಬ ಬಂದ್ರೆ ಹುಳಿಯಾರಿನಲ್ಲಿ ಉಡುದಾರ ಖರೀದಿ ಸಂಭ್ರಮ

ಶುಕ್ರವಾರ, ಏಪ್ರಿಲ್ 26, 2019
33 °C

ಯುಗಾದಿ ಹಬ್ಬ ಬಂದ್ರೆ ಹುಳಿಯಾರಿನಲ್ಲಿ ಉಡುದಾರ ಖರೀದಿ ಸಂಭ್ರಮ

Published:
Updated:
Prajavani

ಹುಳಿಯಾರು: ಹೊಸ ವರ್ಷದ ಹಬ್ಬವೆಂದೇ ಪರಿಗಣಿಸಿರುವ ಯುಗಾದಿ ಹಬ್ಬದ ಸಂತೆ ಗುರುವಾರ ಪಟ್ಟಣದಲ್ಲಿ ಜೋರಾಗಿ ನಡೆಯಿತು.

ಹಬ್ಬಕ್ಕೆ ಬಟ್ಟೆ, ಸರಕು ಸೇರಿದಂತೆ ಇತರ ಪರಿಕರಗಳನ್ನು ಕೊಳ್ಳಲು ಹೋಬಳಿ ವ್ಯಾಪ್ತಿಯ ಗ್ರಾಮಸ್ಥರು ಪಟ್ಟಣಕ್ಕೆ ಬಂದಿದ್ದರಿಂದ ಎಲ್ಲೆಲ್ಲೂ ಜನರೇ ತುಂಬಿದ್ದರು. ಜವಳಿ, ದಿನಸಿ ಹಾಗೂ ರೆಡಿಮೆಡ್ ಅಂಗಡಿಗಳಲ್ಲಿ ಜನರ ಮಹಾಪೂರವೇ ಕಾಣಿಸುತ್ತಿತ್ತು.

ಇನ್ನೂ ತರಕಾರಿ ಸಂತೆಯಲ್ಲಿಯೂ ಜನರು ತುಂಬಿದ್ದರು. ಸಂತೆಯಲ್ಲಿ ಅಲ್ಲಲ್ಲಿ ರೆಡಿಮೆಡ್ ಅಂಗಡಿಗಳು ಸಹ ತಲೆ ಎತ್ತಿದ್ದವು. ಎಲ್ಲ ಕಡೆ ಜನರು ಅಗತ್ಯ ಪರಿಕರ ಕೊಳ್ಳಲು ಮುಗಿಬಿದ್ದಿದ್ದರು. ಬೆಲ್ಲ, ಕಡ್ಲೆ ಸೇರಿದಂತೆ ದಿನಸಿ ಪಾದಾರ್ಥಗಳ ಬೆಲೆ ಗಗನ ಮುಟ್ಟಿದ್ದರೂ ಜನರು ಬರ ಲೆಕ್ಕಿಸದೆ ಅಗತ್ಯಕ್ಕೆ ತಕ್ಕಷ್ಟು ಕೊಂಡು ಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೂವಿನ ಬೆಲೆಯಲ್ಲಿ ಏರಿಕೆಯಾಗಿದ್ದರೆ ಬಾಳೆಹಣ್ಣು ಬೆಲೆಯಲ್ಲಿ ಅಷ್ಟೇನು ಬೆಲೆ ಏರಿಕೆ ಕಂಡು ಬರಲಿಲ್ಲ.

‘ನಾಲ್ಕೈದು ವರ್ಷಗಳಿಂದ ಬರ ಕಾಡುತ್ತಿದೆ. ನಾವು ಬಿತ್ತಿದ ಬೀಜವೇ ಹಿಂದಿರುಗುತ್ತಿಲ್ಲ. ಆದರೂ ಹಿಂದಿನಿಂದ ನಡೆದು ಬಂದ ಪದ್ದತಿಯಂತೆ ಹಬ್ಬ ಆಚರಣೆ ಮಾಡಲೇ ಬೇಕಾಗಿದೆ’ ಎಂದು ಸಂತೆಗೆ ಬಂದಿದ್ದ ರೈತರೊಬ್ಬರು ಪ್ರತಿಕ್ರಿಯೆ ನೀಡಿದರು.

ಯುಗಾದಿ ಉಡದಾರ: ಸಾಮಾನ್ಯವಾಗಿ ಯುಗಾದಿ ಹಬ್ಬದಲ್ಲಿ ಉಡದಾರ ಧರಿಸುವುದು ವಾಡಿಕೆ. ಅದರಂತೆ ಸಂತೆ ಸೇರಿದಂತೆ ಪಟ್ಟಣ ಜನನಿಬಿಡ ಪ್ರದೇಶಗಳಲ್ಲಿ ಉಡದಾರ ಮಾರುವವರ ಸಂಖ್ಯೆ ಹೆಚ್ಚಿತ್ತು.

ಮಾರು ಒಂದಕ್ಕೆ ₹ 5ರಂತೆ ಮಾರಾಟ ಮಾಡುತ್ತಿದ್ದರು. ವರ್ಷದಿಂದ ವರ್ಷಕ್ಕೆ ಉಡದಾರ ವ್ಯಾಪಾರ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ವ್ಯಾಪಾರದ ಪೈಪೋಟಿಯಿಂದ ನಿಖರ ಬೆಲೆ ದೊರೆಯುತ್ತಿಲ್ಲ. ಆದರೆ, ಉಡದಾರ ವ್ಯಾಪಾರದಿಂದ ದಿನದ ಕೂಲಿಗೇನು ಮೋಸವಿಲ್ಲ ಎಂದು ಹೊಸದುರ್ಗದ ಶಿವು ಹೇಳಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !