ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರಿಗೆ ಅನ್ಯಾಯ ಖಂಡಿಸಿ ಪ್ರತಿಭಟನೆ

Last Updated 16 ಜನವರಿ 2021, 3:24 IST
ಅಕ್ಷರ ಗಾತ್ರ

ಗುಬ್ಬಿ: ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬದ ಭೂಮಿಯ ಹಕ್ಕುಚ್ಯುತಿ ಮಾಡುತ್ತಿರುವ ಕಸಬಾ ಕಂದಾಯ ನಿರೀಕ್ಷಕರು ಉಪವಿಭಾಗಾಧಿಕಾರಿಯ ಆದೇಶವನ್ನೇ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದ ಕುಟುಂಬ ವಿವಿಧ ಸಂಘಟನೆಗಳೊಂದಿಗೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಎದುರು ಜಮಾಯಿಸಿದ ಪ್ರತಿಭಟನಕಾರರು ಪರಿಶಿಷ್ಟ ಪಂಗಡದ ಹನುಮಂತಯ್ಯ, ಬಾಗೂರಯ್ಯ ಹಾಗೂ
ಸಿದ್ಧಲಿಂಗಯ್ಯ ಅವರಿಗೆ ನ್ಯಾಯ ಒದಗಿಸ ಬೇಕು. ಖಾತೆ ಬದಲಾವಣೆಗೆ ಉಪವಿಭಾ ಗಾಧಿಕಾರಿಗಳ ನ್ಯಾಯಾಲಯದಲ್ಲಿ ಆದೇಶವಿದ್ದರೂ, ಕಿಮ್ಮತ್ತಿನ ಬೆಲೆ ಕೊಡದೆ ಬೇಜವಾಬ್ದಾರಿ ತೋರುತ್ತಿ ದ್ದಾರೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಕರ್ತವ್ಯಲೋಪವೆಸಗಿದ್ದಾರೆ. ಕಂದಾಯ ನಿರೀಕ್ಷಕ ರಮೇಶ್‌ಕುಮಾರ್ ವಿರುದ್ಧ ಶಿಸ್ತು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಕಳ್ಳಿಪಾಳ್ಯದ 1.22 ಎಕರೆ ಜಮೀನಿನ ಖಾತೆದಾರ ನಂಜುಂಡಯ್ಯ ಅವರ ಹಕ್ಕು ದಾಖಲೆ ಬದಲಿಸಿ ಮೂಲ ಖಾತೆದಾರ ನಾಯ್ಕರ ರಂಗ ಹೆಸರನ್ನು ದಾಖಲಿಸಿ ಮುಂದುವರೆಸಲು ಉಪವಿಭಾಗಾಧಿಕಾರಿ ಅಜಯ್ ಆದೇಶಿಸಿದ್ದಾರೆ. ಭೂಮಿ ಕೇಂದ್ರದಲ್ಲಿ ಅಪ್‌ಲೋಡ್ ಮಾಡಲು ರಮೇಶ್‌ ಕುಮಾರ್ ನೆಪಗಳನ್ನು ಹೇಳುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದರು.

ಕೆಎಂಎಸ್ ಜಿಲ್ಲಾಧ್ಯಕ್ಷ ಎಚ್.ಎಲ್. ರಾಮಮೂರ್ತಿ, ಕೌತಮಾರನಹಳ್ಳಿ ಶಿವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT