ಭಾನುವಾರ, ನವೆಂಬರ್ 1, 2020
20 °C

ಹೊಸದುರ್ಗ: ಚೆಕ್‌ ಡ್ಯಾಮ್‌ನಲ್ಲಿ ಇಬ್ಬರು ಬಾಲಕರ ಮೃತದೇಹ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸದುರ್ಗ: ತಾಲ್ಲೂಕಿನ ಮಾಡದಕೆರೆ ಹೋಬಳಿಯ ನರಸೀಪುರ ಬಳಿ ಹಿರೆಹಳ್ಳದಲ್ಲಿ ಗುರುವಾರ ಮೀನು ಹಿಡಿಯಲು ಹೋಗಿ ಕಣ್ಮರೆಯಾಗಿದ್ದ ಇಬ್ಬರು ಬಾಲಕರ ಮೃತದೇಹ  ಶುಕ್ರವಾರ ಮುಂಜಾನೆ ಇಲ್ಲಿನ ಚೆಕ್ ಡ್ಯಾಮ್‌ನಲ್ಲಿ ಪತ್ತೆಯಾಗಿವೆ.

ಸಮೀಪದ ದೇವಪುರ ಕಾಲೊನಿಯ ಈರಣ್ಣನ ಪುತ್ರ ಪ್ರಜ್ವಲ್ (12), ಇದೇ ಗ್ರಾಮದ ಶಂಕರಪ್ಪನ ಪುತ್ರ ಜಯಂತ್(13) ಮೃತ ಬಾಲಕರು. ಪ್ರಜ್ವಲ್ 6 ನೇ ತರಗತಿ, ಜಯಂತ್ 7 ನೇ ತರಗತಿ ಓದುತ್ತಿದ್ದರು. 

ಅಗ್ನಿ ಶಾಮಕ ಠಾಣೆ ಸಿಬಂದಿ, ಈಜುಗಾರರು ಹಾಗೂ ಗ್ರಾಮಸ್ಥರು ಹಳ್ಳದ ವ್ಯಾಪ್ತಿಯಲ್ಲಿ ನಿರಂತರ  ಕಾರ್ಯಾಚರಣೆ ನಡೆಸಿದ್ದರು.

ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು