1.60 ಲಕ್ಷ ಸೋಲಾರ್ ಉಪಕರಣ ಮಾರಾಟ: ಆರ್ಬ್‌

7

1.60 ಲಕ್ಷ ಸೋಲಾರ್ ಉಪಕರಣ ಮಾರಾಟ: ಆರ್ಬ್‌

Published:
Updated:
ನಗರದ ವೈಟ್‌ ಲೋಟಸ್‌ ಹೋಟೆಲ್‌ನಲ್ಲಿ ಮಂಗಳವಾರ ಆರ್ಬ್ ಎನರ್ಜಿ ಕಂಪೆನಿಯ ಕಾರ್ಯಕ್ರಮ ನಡೆಯಿತು

ಉಡುಪಿ: ಆರ್ಬ್ ಎನರ್ಜಿ ಸೋಲಾರ್ ಕಂಪೆನಿಯು ದೇಶದಾದ್ಯಂತ 1.60 ಲಕ್ಷ ಸೋಲಾರ್ ಉಪಕರಣಗಳನ್ನು ಮಾರಾಟ ಮಾಡುವ ಮೂಲಕ ಗ್ರಾಹಕರಿಂದ ಮನ್ನಣೆ ಪಡೆದುಕೊಂಡಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಕಿರಣ್‌ ತಿಳಿಸಿದರು.

ನಗರದ ವೈಟ್‌ ಲೋಟಸ್‌ ಹೋಟೆಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂಸ್ಥೆಯು ದೇಶದ ಹಲವೆಡೆ ಇದುವರೆಗೂ 40 ಮೆಗಾವಾಟ್‌ ಸಾಮರ್ಥ್ಯದ ಸೌರ ಚಾವಣಿಗಳನ್ನು ಅಳವಡಿಸಿದೆ. ಸಂಸ್ಥೆಯ ಎರಡು ಕೇಂದ್ರಗಳು ಬೆಂಗಳೂರಿನಲ್ಲಿದ್ದು, ಸೌರ ದ್ಯುತಿಜನಕ ಫಲಕಗಳು ಹಾಗೂ ಸೋಲಾರ್ ವಾಟರ್ ಹೀಟಿಂಗ್ ಉಪಕರಣಗಳನ್ನು ತಯಾರಿಸಲಾಗುತ್ತಿದೆ’ ಎಂದರು.

ಉಡುಪಿಯ ಕೋಟಾದಲ್ಲಿ ಜನತಾ ಫಿಶ್ ಮಿಲ್‌ ಹಾಗೂ ಆಯಿಲ್‌ ಪ್ರಾಡಕ್ಟ್‌ ಕಂಪನಿಗೆ 1 ಮೆಗಾವಾಟ್‌ ಸಾಮರ್ಥ್ಯದ ಮೇಲ್ಚಾವಣಿ ಅಳವಡಿಸಲಾಗುತ್ತಿದೆ. ಈ ಮೂಲಕ ಜನತಾ ಕಂಪನಿಯು ಪ್ರತಿವರ್ಷ ₹ 1 ಕೋಟಿ ವಿದ್ಯುತ್ ಬಿಲ್‌ ಉಳಿತಾಯವಾಗಲಿದೆ ಎಂದರು.

ಸೋಲಾರ್ ಮೇಲ್ಚಾವಣಿ ಅಳವಡಿಕೆಗೆ ಸಾಲ ನೀಡುತ್ತಿರುವ ಸಂಸ್ಥೆಗಳ ಪೈಕಿ ಆರ್ಬ್‌ ಎನರ್ಜಿ ಮುಂಚೂಣಿಯಲ್ಲಿದ್ದು, ಸಾಲ ಮರು ಪಾವತಿಗೆ ಇಎಂಐ ಸಾಲ ಸೌಲಭ್ಯ ಇದೆ. ಕಂಪೆನಿಗಳು ಸೌರಶಕ್ತಿ ಚಾವಣಿ ಅಳವಡಿಕೆಗೆ ಹಾಕಿದ ಬಂಡವಾಳವು ಕೇವಲ ನಾಲ್ಕೈದು ವರ್ಷಗಳಲ್ಲಿ ವಾಪಸ್‌ ಪಡೆಯಬಹುದು ಎಂದು ಕಿರಣ್‌ ತಿಳಿಸಿದರು.

ಕೇಂದ್ರಸರ್ಕಾರ ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುತ್ತಿದ್ದು, ಭವಿಷ್ಯದ ಇಂಧನದ ಶಕ್ತಿ ಎಂದೇ ಬಿಂಬಿತವಾಗಿರುವ ಸೌರಶಕ್ತಿಯನ್ನು ಬಳಸಿಕೊಂಡು ಆರ್ಥಿಕವಾಗಿ ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ಕಂಪನಿಯು ಉತ್ತಮ ಗುಣಮಟ್ಟದ, ದೀರ್ಘಕಾಲ ಬಾಳಿಕೆ ಬರುವ ಉಪಕರಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದರು.

ಜನತಾ ಫಿಷ್‌ ಮಿಲ್‌ ಪಾಲುದಾರ ರಕ್ಷಿತ್ ಕುಂದರ್ ಮಾತನಾಡಿ, ‘ಆರ್ಬ್‌ ಎನರ್ಜಿ ಕಂಪನಿ ಸೋಲಾರ್ ಮೇಲ್ಚಾವಣಿ ಅಳವಡಿಕೆಗೆ ಮುನ್ನ ನೀಡಿದ್ದ ಭರವಸೆಗಳು ಹುಸಿಯಾಗಿಲ್ಲ. ಆರಂಭದಲ್ಲಿ ಪ್ರಾಯೋಗಿಕವಾಗಿ 100 ಕಿಲೋ ವಾಟ್‌ ಸಾಮರ್ಥ್ಯದ ಘಟಕ ಆರಂಭಿಸಲಾಯಿತು. ಈಗ 1000 ಕಿ.ವಾಟ್‌ ಸಾಮರ್ಥ್ಯದ ಸೌರ ಮೇಲ್ಚಾವಣಿ ಅಳವಡಿಸಿಕೊಳ್ಳಲಾಗಿದೆ’ ಎಂದರು.

ಸಂಸ್ಥೆಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಸುಧೀಂದ್ರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !