ವರ್ಗಾವಣೆಯಾಗಿದ್ದರೂ ಲಂಚ ಪಡೆದು ಕಡತ ವಿಲೇವಾರಿ ಆರೋಪ: 1.28 ಲಕ್ಷ ನಗದು, 23 ಫೈಲ್ ವಶ
ಮಧುಕೇಶ್ವರ್ ನಿವಾಸದ ಮೇಲೆ ಎಸಿಬಿ ದಾಳಿ

ಉಡುಪಿ: ಕುಂದಾಪುರ ಉಪ ವಿಭಾಗಾಧಿಕಾರಿಯಾಗಿದ್ದ ಮಧುಕೇಶ್ವರ್ ಅವರ ವಸತಿ ಗೃಹದ ಮೇಲೆ ಗುರುವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ನಗದು ಹಾಗೂ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ₹ 1.28 ಲಕ್ಷ ನಗದು, 23 ಫೈಲ್, ಒಂದು ರಿಜಿಸ್ಟರ್ ಪತ್ತೆಯಾಗಿದೆ. 2 ದಿನಗಳ ಹಿಂದೆ ಮಧುಕೇಶ್ವರ್ ವರ್ಗಾವಣೆಯಾಗಿದ್ದರು. ನೂತನ ಉಪ ವಿಭಾಗಾಧಿಕಾರಿ ರಾಜು ಅವರಿಗೆ ಅಧಿಕಾರವನ್ನೂ ಹಸ್ತಾಂತರ ಮಾಡಿದ್ದರು. ಆದರೂ, ವಸತಿ ಗೃಹದಲ್ಲಿ ಉಳಿದುಕೊಂಡು ಭೂವ್ಯಾಜ್ಯಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ವರ್ಗಾವಣೆಯಾದ ಬಳಿಕ ಯಾವುದೇ ಕಡತಗಳನ್ನು ವಿಲೇವಾರಿ ಮಾಡುವಂತಿಲ್ಲ. ಆದರೂ, ಮಧುಕೇಶ್ವರ್ ಹಳೆಯ ದಿನಾಂಕವನ್ನು ನಮೂದಿಸಿ ವಿಲೇವಾರಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ವಿಚಾರಣೆ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಕ್ರಿಯಿಸಿ (+)