ಬುಧವಾರ, ಅಕ್ಟೋಬರ್ 16, 2019
21 °C
ಪರ್ಯಾಯ ಪಲಿಮಾರು ಶ್ರೀಗಳಿಂದ ಬೀಳ್ಕೊಡುಗೆ

ಭಾವಿ ಪರ್ಯಾಯಕ್ಕೆ ಅದಮಾರು ಕಿರಿಯ ಶ್ರೀಗಳ ಸ೦ಚಾರ

Published:
Updated:
Prajavani

ಉಡುಪಿ: 2020ರ ಅದಮಾರು ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಗುರುವಾರ ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥರು ಸ೦ಚಾರ ಆರಂಭಿಸಿದರು.

ಪರ್ಯಾಯ ಪಲಿಮಾರು ಮಠಾಧೀಶರಾದ ವಿದ್ಯಾಧೀಶ ತೀರ್ಥರು ಹಾಗೂ ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥರ ಉಪಸ್ಥಿತಿಯಲ್ಲಿ ಅದಮಾರು ಮಠದ ಕಿರಿಯ ಯತಿಗಳು ಶ್ರೀಕೃಷ್ಣ-ಮುಖ್ಯಪ್ರಾಣ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪಲಿಮಾರು ಶ್ರೀಗಳ ಆಶೀರ್ವಾದ ಪಡೆದು ಸಂಚಾರ ಆರಂಭಿಸಿದರು.

ಪಟ್ಟದ ದೇವರನ್ನು ಪಲ್ಲಕ್ಕಿಯಲ್ಲಿರಿಸಿ ರಾಜಾ೦ಗಣದ ಮು೦ಭಾಗದವರೆಗೂ ಮೆರವಣಿಗೆಯಲ್ಲಿ ಸಾಗಿ ಬರಲಾಯಿತು. ಪರ್ಯಾಯ ಶ್ರೀಗಳಿಂದ ಬೀಳ್ಕೊಡುಗೆ ಪಡೆದು ಸ೦ಚಾರಕ್ಕೆ ತೆರಳಿದರು.

ಪಲಿಮಾರು ಶ್ರೀಗಳ ಆಪ್ತ ಕಾರ್ಯದರ್ಶಿ ಗಿರೀಶ್ ಉಪಾಧ್ಯಯ, ಅದಮಾರು ಮಠದ ಅತಿಥಿಗೃಹದ ಮ್ಯಾನೇಜರ್ ಗೋವಿ೦ದ ರಾಜ್ ಸೇರಿದ೦ತೆ ಹಲವರು ಉಪಸ್ಥಿತರಿದ್ದರು.

Post Comments (+)