ಕಾರ್ಕಳ: ತಾಲ್ಲೂಕಿನ ಪಳ್ಳಿ ಗ್ರಾಮದ ಅಡಪಾಡಿ ಉಮಾಮಹೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಮಹಾ ರುದ್ರಾನುಷ್ಠಾನ ಧಾರ್ಮಿಕ ಅನುಷ್ಠಾನಗಳು ನಡೆದವು.
ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್ ಅವರ ಉಪಸ್ಥಿತಿಯಲ್ಲಿ, ತಂತ್ರಿ ವೇದಮೂರ್ತಿ ದಯಾನಂದ ಭಟ್ ಕಲ್ಲಡ್ಕ ಅವರ ನೇತೃತ್ವದಲ್ಲಿ 26 ಮಂದಿ ವೈದಿಕರು ಭಾಗವಹಿಸಿದ್ದರು.
ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ಫಲ ತಾಂಬೂಲ ನ್ಯಾಸ, ಗಣಪತಿ ಪೂಜೆ, ಪುಣ್ಯಾಹ, ಮಾತೃಕಾ ಪೂಜೆ, ನಾಂದಿ, ಗಣಹೋಮ, ಪಂಚಾಮೃತಾಭಿಷೇಕ, ಮಹಾನ್ಯಾಸ ಪೂರ್ವಕ ಮಹಾರುದ್ರ ಅಭಿಷೇಕ, ಅಭಿಷೇಕಾಂಗ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದವು. ನಂತರ ನಡೆದ ಅನ್ನಸಂತರ್ಪಣೆಯಲ್ಲಿ ಊರ ಪರವೂರಿನ ಭಕ್ತಾದಿಗಳು ಭಾಗವಹಿಸಿದರು.
ಶಾಂತಿಮಂತ್ರ ಪಠಣ, ಭಜನೆ, ಮಹಾಪೂಜೆ ಸಂಪನ್ನಗೊಂಡವು. ಸೋಮವಾರ ಬೆಳಿಗ್ಗೆ ವಿವಿಧ ಧಾರ್ಮಿಕ ಅನುಷ್ಠಾನ, ಮಹಾರುದ್ರಾಭಿಷೇಕ, ಅಭಿಷೇಕಾಂಗ ಪೂಜೆ, ಮಧ್ಯಾಹ್ನ ಮಹಾ ಅಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ನಂತರ ಮಹಾ ಮಂತ್ರಾಕ್ಷತೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.