ಶುಕ್ರವಾರ, ನವೆಂಬರ್ 22, 2019
19 °C

ಆಗುಂಬೆ ಘಾಟಿ: ಎಲ್ಲ ವಾಹನ ಸಂಚಾರಕ್ಕೆ ಮುಕ್ತ

Published:
Updated:

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ‘ಎ’ ಆಗುಂಬೆ ಘಾಟಿಯು ಲಘು ಹಾಗೂ ಭಾರಿ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಹಿಂದೆ, ಹೆಚ್ಚು ಮಳೆಬಿದ್ದ ಪರಿಣಾಮ ಘಾಟಿಯ ಕೆಲವು ತಿರುವುಗಳಲ್ಲಿ ಗುಡ್ಡ ಕುಸಿದಿತ್ತು. ದುರಸ್ತಿಗಾಗಿ ಎಲ್ಲ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ದುರಸ್ತಿ ಮುಗಿದ ನಂತರ ಸಾರ್ವಜನಿಕ ಹಿತ ದೃಷ್ಟಿಯಿಂದ ಲಘು ವಾಹನಗಳ ಪ್ರವೇಶಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು.

ಪ್ರಸ್ತುತ ಘಾಟಿಯಲ್ಲಿ ಯಾವುದೇ ಗುಡ್ಡ ಕುಸಿತ ಹಾಗೂ ಮರಗಳು ಉರುಳಿ ಬಿದ್ದಿಲ್ಲ. ಸಂಚಾರಕ್ಕೆ ಅಡ್ಡಿಯಾಗುವ ಸಂಭವ ಇಲ್ಲ. ಹಾಗಾಗಿ, ಆಗುಂಬೆ ಘಾಟಿಯಲ್ಲಿ ಲಘು ವಾಹನ ಹಾಗೂ ಭಾರಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)