ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಂಕ್ಷ ಪೈಗೆ ಡಬಲ್‌ ಪ್ರಶಸ್ತಿ ಗರಿ

18ನೇ ರಾಜ್ಯಮಟ್ಟದ ಮುಕ್ತ ಬ್ಯಾಡ್ಮಿಂಟನ್ ಟೂರ್ನಿ
Last Updated 26 ಮೇ 2019, 15:28 IST
ಅಕ್ಷರ ಗಾತ್ರ

ಉಡುಪಿ: ಇಲ್ಲಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯವಾದ 18ನೇರಾಜ್ಯಮಟ್ಟದ ಮುಕ್ತ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ 15 ಹಾಗೂ 17 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್‌ನಲ್ಲಿ ಆಕಾಂಕ್ಷ ಪೈ ಪ್ರಶಸ್ತಿ ಗೆದ್ದುಕೊಂಡರು.

11 ವರ್ಷದೊಳಗಿನವ ಬಾಲಕಿಯರ ಸಿಂಗಲ್ಸ್‌ನಲ್ಲಿ ಅವನಿ ಪಿ.ಶೆಟ್ಟಿ ವಿರುದ್ಧ ಅವನಿ ಜೈನ್ ಗೆಲುವು ಸಾಧಿಸಿದರೆ,11 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ ಫೈನಲ್‌ನಲ್ಲಿ ಜಿ.ಬಿ.ಹರ್ಷ ವಿರುದ್ಧ ವೈಭವ್ ಜಯಗಳಿಸಿದರು.

13 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್‌ ಫೈನಲ್‌ನಲ್ಲಿ ಅವನಿ ಜೈನ್ ವಿರುದ್ಧ ಧೃವಿ ಪ್ರಸಾದ್ ಜಯಗಳಿಸಿದರೆ, ಬಾಲಕರ ಸಿಂಗಲ್ಸ್‌ನಲ್ಲಿ ಕ್ಷಿತಿಜ್ ದೀಪಕ್ ವಿರುದ್ಧ ಪ್ರಶಾಂತ್ ಬಿ.ಕೋಟ್ಯಾನ್‌ ವಿಜಯಿಯಾದರು.

15 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್‌ ಫೈನಲ್ಸ್‌ನಲ್ಲಿ ಮಾಹಿಷ್ಮತಿ ಆರ್.ಶೆಟ್ಟಿಗಾರ್ ಅವರನ್ನು ಆಕಾಂಕ್ಷ ಪೈ ಮಣಿಸಿದರೆ, ಬಾಲಕರ ಸಿಂಗಲ್ಸ್‌ನಲ್ಲಿ ಅಭಿಷೇಕ್ ವಿರುದ್ಧ ಜೈದೀಪ್‌ ಲೋಕೇಶ್‌ ಗೆಲುವು ಪಡೆದುಕೊಂಡರು.

17ವರ್ಷದೊಳಗಿನವ ಬಾಲಕಿಯರ ಸಿಂಗಲ್ಸ್‌ ಫೈನಲ್ಸ್‌ನಲ್ಲಿ ಧೃತಿ ಕಾಂಚನ್ ವಿರುದ್ಧ ಆಕಾಂಕ್ಷ ಪೈ ಜಯ ಸಾಧಿಸಿದರೆ, ಬಾಲಕರ ವಿಭಾಗದಲ್ಲಿ ಮಾಧವ್ ನಾಯಕ್ ವಿರುದ್ಧ ಆರುಷ್ ಪೊಟಾರ್ಡೊ ಗೆದ್ದು ಬೀಗಿದರು.

17 ವರ್ಷದೊಳಗಿನವರ ಬಾಲಕರ ಡಬಲ್ಸ್‌ನಲ್ಲಿ ಆದಿತ್ಯ ನಾಯಕ್‌ ಹಾಗೂ ಪ್ರಥಮ್‌ ಜೈನ್ ಜೋಡಿಯನ್ನು ಮಾಧವ ಪೈ ಹಾಗೂ ಆರುಷ್‌ಪೊಟಾರ್ಡೊ ಮಣಿಸಿತು.

ವಿಜೇತರಿಗೆಪ್ರಶಸ್ತಿ ವಿತರಿಸಿ ಮಾತನಾಡಿದ ಸಿಂಡಿಕೇಟ್ ಬ್ಯಾಂಕ್ ಮಹಾ ಪ್ರಬಂಧಕ ಭಾಸ್ಕರ ಹಂದೆ ಮಾತನಾಡಿ, ಹಲವು ವರ್ಷಗಳಿಂದ ಸಿಂಡಿಕೇಟ್‌ ಬ್ಯಾಂಕ್‌ ಕ್ರೀಡೆಗಳಿಗೆ ಆರ್ಥಿಕ ನೆರವು ನೀಡುತ್ತಾ ಬಂದಿದ್ದು, ಈ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ ಎಂದರು.

ಒಳಾಂಗಣ ಕ್ರೀಡಾಂಗಣದಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಇದ್ದರೂ ಕ್ರೀಡಾಪುಟಗಳಿಗೆ ಸೌಲಭ್ಯ ನೀಡದ ಬಗ್ಗೆ ಹಲವರು ದೂರಿದ್ದಾರೆ. ಸಂಘಟಕರು ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ಉಡುಪಿ ಮಣಿಪಾಲ ಬ್ಯಾಡ್ಮಿಂಟನ್‌ ಸ್ಫೋರ್ಟ್ಸ್‌ ಕ್ಲಬ್‌ ಅಧ್ಯಕ್ಷ ಅಶೋಕ್ ಪಣಿಯಾಡಿ, ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಸೊಹೈಲ್ ಅಮೀನ್, ಲಯನ್ಸ್ ಜಿಲ್ಲೆ ದ್ವಿತೀಯ ಉಪ ಗವರ್ನರ್ ವಿಶ್ವನಾಥ ಶೆಟ್ಟಿ, ರಾಮಚಂದ್ರ ಮಾಬಿಯಾನ್, ಸುಬ್ರಹ್ಮಣ್ಯ ಶೇರಿಗಾರ್, ಗಣೇಶ್ ಕುಮಾರ್ ಮಟ್ಟು, ಡಾ.ಸತೀಶ್ ಮಲ್ಯ, ವೈ.ಸುಧೀರ್ ಕುಮಾರ್, ಎಂ.ಕಾಶೀರಾಮ್ ಪೈ, ರಾಮಚಂದ್ರ ಶೆಣೈ, ಅರುಣ್ ಶೇರಿಗಾರ್, ನಿಖಿಲ್ ಬಾಳಿಗಾ, ಸಂದೀಪ್ ನಾಯಕ್, ಮೋಹನ್, ನಿತಿನ್ ಪೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT