ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಭವನ ಸಮನ್ವಯತೆಯ ಕೇಂದ್ರ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕಾಬೆಟ್ಟುವಿನಲ್ಲಿ ₹6 ಕೋಟಿ ವೆಚ್ಚದ ಡಾ.ಅಂಬೇಡ್ಕರ್ ಭವನದ ಶಿಲಾನ್ಯಾಸ
Last Updated 15 ನವೆಂಬರ್ 2022, 5:26 IST
ಅಕ್ಷರ ಗಾತ್ರ

ಕಾರ್ಕಳ: ಅಂಬೇಡ್ಕರ್ ಭವನಗಳು ಸಮಾಜದ ಎಲ್ಲ ಸ್ತರದ ಜನರು ಒಟ್ಟಾಗಿ ಸಮನ್ವತೆಯಿಂದ ಬದುಕುವ ಸಮನ್ವ ಯತೆಯ ಕೇಂದ್ರಗಳಾಗಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇಲ್ಲಿನ ಕಾಬೆಟ್ಟುವಿನಲ್ಲಿ ಸೋಮವಾರ ₹ 6 ಕೋಟಿ ವೆಚ್ಚದ ಡಾ.ಬಿ.ಆರ್ ಅಂಬೇಡ್ಕರ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 75 ವರ್ಷಗಳಿಂದ ಇದ್ದ ಸಮುದಾಯದ ಸಮಸ್ಯೆಗಳು ಈಗ ಪರಿಹಾರಗೊಳ್ಳುತ್ತಿವೆ. ಇವು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರಗಳಿಂದ ಮಾತ್ರ ಸಾಧ್ಯವಾಗಿದ್ದು, ಮೀಸಲಾತಿ ಹೆಚ್ಚಿಸಿರುವುದೂ ಐತಿಹಾಸಿಕ ಕ್ರಮವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್ ಕುಮಾರ್ ಮಾತನಾಡಿ ‘ಕಾಬೆಟ್ಟುವಿನಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣವಾಗಬೇಕು, ವಿಶೇಷವಾಗಿ ಇಲ್ಲಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕಾರ್ಯಕ್ರಮಗಳಿಗೆ ಒಂದು ವ್ಯವಸ್ಥಿತವಾದ ಕಟ್ಟಡದ ಅಗತ್ಯವನ್ನು ಮನಗಂಡು ಒಂದು ಎಕರೆ ಜಾಗ ಕಾದಿರಿಸಲಾಗಿತ್ತು. ಸರ್ಕಾರದಿಂದ ಈ ಹಿಂದೆ ಮಂಜೂರು ಮಾಡಿದ ₹ 1. 5 ಕೋಟಿ ಕಡಿಮೆಯಾದ ಕಾರಣ ಹೆಚ್ಚಿನ ಅನುದಾನ ಒದಗಿಸಿಕೊಡುವಂತೆ ಸಚಿವ ಶ್ರೀನಿವಾಸ ಪೂಜಾರಿ ಅವರಲ್ಲಿ ವಿನಂತಿಸಿದಾಗ ₹ 6 ಕೋಟಿ ಅನುದಾನ ಮಂಜೂರುಗೊಳಿಸಿದ್ದಾರೆ’ ಎಂದರು.

ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಮಣಿರಾಜ್ ಶೆಟ್ಟಿ, ಪುರಸಭಾಧ್ಯಕ್ಷೆ ಸುಮಾಕೇಶವ್, ಮುಖ್ಯಾಧಿಕಾರಿ ರೂಪಾ ಟಿ.ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ವಿ, ಮದ್ದೂರು ಕೆ. ಜಿ. ಎಸ್, ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣಿಕರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಮು ವೈ, ತಹಶೀಲ್ದಾರ್ ಪ್ರದೀಪ ಕುರ್ಡೆಕರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರುದತ್‌ ಎಂ.ಎನ್, ಕೊರಗ ಸಮುದಾಯದ ಕೊರಗ ಪಳ್ಳಿ, ಮೊಗೇರ ಸಮುದಾಯದ ಶ್ಯಾಮ್ ಕಾಬೆಟ್ಟು, ಆದಿದ್ರಾವಿಡ ಸಮಾಜದ ಬೊಗ್ಗು ಪರಪ್ಪಾಡಿ, ಪರವ ಸಮಾಜದ ಚುಕುಡ ಪರವ, ನಲಿಕೆ ಸಮುದಾಯದ ಬಾಬು ನಲಿಕೆ, ಶಾಂತ ಶಿವಪುರ ಇದ್ದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡ ಪಾಣಾರ, ದೈವ ನರ್ತಕ ಜಗ್ಗಣ್ಣ, ಬೋಳ ನಾರಾಯಣ, ಯಕ್ಷಗಾನ ಕಲಾವಿದ ಸುರೇಶ್, ಚಿತ್ರ ನಟ ಸುಜಿತ್ ಪಳ್ಳಿ, ರಂಗಭೂಮಿ ಕಲಾವಿದ ಸುಭಾಷ್ ಕಲ್ಯಾ, ಹರಿಪ್ರಸಾದ್ ನಂದಳಿಕೆ, ಚಿತ್ರಕಲೆ ಕಲಾವಿದ ಸಂತೋಷ್ ಮಾಳ, ನಾದಸ್ವರ ಮಾಳ ಮೋಹನ್, ನಟ ರಾಜೇಶ್ ದಾನಶಾಲೆ, ಕ್ರೀಡಾಪಟು ಹರಿಣಿ ಕೊಳಕೆ ಇರ್ವತ್ತೂರು, ಕರಾಟೆ ಪಟು ಪವನ್ ನಕ್ರೆ, ಎಂಬಿಬಿಎಸ್ ಪದವೀಧರ ಕಾರ್ತಿಕ್, ವೈಟ್‌ಲಿಫ್ಟಿಂಗ್ ಕ್ರೀಡಾಪಟು ದೀಪಾ ರೆಂಜಾಳ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸುಂದರ ಬಿ. ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್. ಡಿ. ಬಾಬು ಸ್ವಾಗತಿಸಿದರು. ನಾಗೇಶ್ ಪಳ್ಳಿ ನಿರೂಪಿಸಿದರು. ಸತೀಶ್ ಇರ್ವತ್ತೂರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT