ಕುಂದಾಪುರ: ಇಲ್ಲಿಗೆ ಸಮೀಪದ ಕುಂಭಾಸಿ ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥ ಶ್ರೀಪಾದರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀ ಪಾದಂಗಳವರನ್ನು ಪೂರ್ಣಕುಂಭ ಹಾಗೂ ಪಂಚವಾದ್ಯಗಳೊಂದಿಗೆ ಸ್ವಾಗತಿಸಲಾಯಿತು. ಶ್ರೀಗಳನ್ನು ಸ್ವಾಗತಿಸಿದ ದೇವಳದ ಅನುವಂಶಿಕ ಆಡಳಿತ ಧರ್ಮದರ್ಶಿಕೆ.ಶ್ರೀರಮಣ ಉಪಾಧ್ಯಾಯ, ವಿಶ್ರಾಂತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಹಾಗೂ ಪರ್ಯಾಯ ಅರ್ಚಕ ಕೆ.ವ್ಯಾಸ ಉಪಾಧ್ಯಾಯ ಇವರು, ಶ್ರೀದೇವರ ಪ್ರಸಾದವನ್ನು ಸಮರ್ಪಿಸಿ, ಪಾದ ಪೂಜೆ ನೆರವೇರಿಸಿ, ಮಂಗಳಾರತಿ ಮಾಡಿದರು.

ಬಳಿಕ ಆಶೀರ್ವಚನ ನೀಡಿದ ಶ್ರೀಸುಭುದೇಂದ್ರ ತೀರ್ಥ ಶ್ರೀಪಾದರು, ಆನೆಗುಡ್ಡೆ ಶ್ರೀಕ್ಷೇತ್ರದ ಪೌರಾಣಿಕ ಹಿನ್ನಲೆ ಕುರಿತು ವಿಶೇಷ ಪ್ರವಚನ ನೀಡಿದರು. ಕ್ಷೇತ್ರದ ಸ್ವಚ್ಛತೆ ಹಾಗೂ ಸತ್ಕಾರವನ್ನು ಪ್ರಶಂಸಿದರು.

ದೇವಳದ ಮೊಕ್ತೇಸರಾದ ಕೆ.ಪದ್ಮನಾಭ ಉಪಾಧ್ಯಾಯ, ಕೆ.ನಿರಂಜನ ಉಪಾಧ್ಯಾಯ, ದೇವಳದ ವ್ಯವಸ್ಥಾಪಕರಾದ ನಟೇಶ್ ಕಾರಂತ್,ಮಂತ್ರಾಲಯ ಮಠದ ವಿದ್ವಾಂಸರು, ಪರ್ಯಾಯ ಅರ್ಚಕರ ಸಹೋದರರು, ಅರ್ಚಕ ಮಂಡಳಿ ಸದಸ್ಯರು, ಆಡಳಿತ ವಿಭಾಗದ ಸಿಬ್ಬಂದಿಗಳು ಇದ್ದರು.

ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ:

ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಮಂತ್ರಾಲಯ ಕ್ಷೇತ್ರದ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ವಿಶಾಲವಾದ ಕೋಟಿ ತೀರ್ಥ ಪುಷ್ಕರಣಿ, ಶಿಲಾಮಯ ಪುರಾತನ ದೇವಾಲಯ ಹಾಗೂ ಜೋಡಿ ತಟ್ಟಿರಾಯರನ್ನು ನೋಡಿ ಬಹಳಷ್ಟು ಮೆಚ್ಚಿಗೆ ವ್ಯಕ್ತಪಡಿಸಿದ ಸ್ವಾಮೀಜಿಯವರು, ದೇವಾಲಯಕ್ಕೆ ಸಂಬಂಧಿಸಿದ ಎಲ್ಲಾ ಶಾಸನಗಳಿಗೆ ವಿಶೇಷ ಆದ್ಯತೆ ನೀಡಿ ಸಮರ್ಪಕವಾಗಿ ಮತ್ತು ಸುರಕ್ಷಿತವಾಗಿ ಜೋಡಿಸಿ ಇಡುವಂತೆ ದೇವಾಲಯದ ವ್ಯವಸ್ಥಾಪನಾ ಸಮಿತಿಯವರಿಗೆ ಮನವರಿಕೆ ಮಾಡಿದರು. ಈ ಬಗ್ಗೆ ತನ್ನ ಸಹಾಯ ಬೇಕಾದಲ್ಲಿ ತಿಳಿಸುವಂತೆಯೂ ಸೂಚಿಸಿದರು. ನೆರೆದ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಹರಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-28-1583106446

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.