ಮಂಗಳವಾರ, ನವೆಂಬರ್ 12, 2019
19 °C

ಸರಗಳವು ಆರೋಪಿ ಬಂಧನ

Published:
Updated:
Prajavani

ಉಡುಪಿ: ಮಣಿಪಾಲ ಸಮೀಪದ ಮಂಚಿಕೋಡಿ ಬಳಿ ಗುರುವಾರ ಬೆಳಿಗ್ಗೆ ಮಹಿಳೆಯ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಚಿಕುಮೇರಿಯ ಪ್ರವೀಣ್ ನಾಯ್ಕ ಬಂಧಿತ. ಆತನಿಂದ ₹ 9,000 ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಗುರುವಾರ ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದ ಲಲಿತಾ ನಾಯ್ಕ ಅವರ ಚಿನ್ನದ ಸರ ಕೀಳಲು ಯತ್ನಿಸಿ, ಕೈಗೆ ಸಿಕ್ಕ ಅರ್ಧ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದ. ಈ ಸಂದರ್ಭ ಮಹಿಳೆಯು ಆರೋಪಿಯನ್ನು ಗುರುತಿಸಿ ಸ್ವಂತ ಊರಿನ ಪ್ರವೀಣ ನಾಯ್ಕ ಎಂಬಾತನೇ ಕೃತ್ಯ ಎಸಗಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರವೀಣ್ ನಾಯ್ಕನನ್ನು ಬಂಧಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಮಣಿಪಾಲ ಠಾಣೆಯ ಪ್ರಭಾರ ಇನ್‌ಸ್ಪೆಕ್ಟರ್ ಸಂಪತ್ ಕುಮಾರ್, ಪಿಎಸ್‌ಐ ಶ್ರೀಧರ ನಂಬಿಯಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಪ್ರತಿಕ್ರಿಯಿಸಿ (+)