ಹಾಳೆ ಮರದ ಕಷಾಯ ಕುಡಿದು ಸಂಭ್ರಮಿಸಿದ ನಗರವಾಸಿ

7
ಆಷಾಢದ ಗಮ್ಮತ್ತು

ಹಾಳೆ ಮರದ ಕಷಾಯ ಕುಡಿದು ಸಂಭ್ರಮಿಸಿದ ನಗರವಾಸಿ

Published:
Updated:

ಉಡುಪಿ: ಜಿಲ್ಲೆಯಲ್ಲಿ ಆಷಾಢ ಅಮಾವಾಸ್ಯೆಯನ್ನು ಹಾಳೆ ಮರದ ಕಷಾಯ ಕುಡಿಯುವ ಮೂಲಕ ಶನಿವಾರ ಆಚರಿಸಲಾಯಿತು.

ಕಷಾಯ ತಯಾರಿಸುವ ವಸ್ತುಗಳು ನಗರವಾಸಿಗಳಿಗೆ ಲಭಿಸದ ಕಾರಣ ತುಳುಕೂಟ ಉಡುಪಿ ಸಂಘಟನೆ ಹಾಗೂ ಕ್ಷೇತ್ರ ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆ ಕೈ ಜೋಡಿಸಿ ಉಡುಪಿಯ ಅಮ್ಮಣ್ಣಿ ರಾಮಣ್ಣ ಸಭಾಂಗಣದಲ್ಲಿ ಉಚಿತವಾಗಿ ಹಾಳೆ ಮರದ ಕಷಾಯ, ಮೆಂತೆ ಗಂಜಿಯನ್ನು ವಿತರಿಸಿದೆ. ಇದರ ಸೇವನೆಯಿಂದ ಮಳೆಗಾಲದಲ್ಲಿ ಬರುವ ಯಾವುದೇ ರೋಗಗಳು ಬಾಧಿಸುವುದಿಲ್ಲ.

ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ವಿಶೇಷ ಸ್ಥಾನಮಾನವಿದೆ. ಆಷಾಡ ತಿಂಗಳಲ್ಲಿ ಬರುವ ಈ ಅಮವ್ಯಾಸೆಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ಅಂದು ಹಾಳೆ ಮರದ ತೊಗಟೆಯ ಕಷಾಯ ಕುಡಿಯುವುದು ವಾಡಿಕೆ. ನಸುಕಿನಲ್ಲಿ ಎದ್ದು ಹಾಲೆ ಮರದ ತೊಗಟೆಯನ್ನು ಕಲ್ಲಿನಲ್ಲಿ ಜಜ್ಜಿ ತೆಗೆದು ಕಲ್ಲಿನಿಂದಲೇ ತೊಗಟೆ ಸ್ವಚ್ಛಗೊಳಿಸಿ ಗುದ್ದಿ ರಸ ತೆಗೆಯಲಾಗುತ್ತದೆ. ನಂತರ ಈ ರಸದೊಂದಿಗೆ ಬೆಳ್ಳುಳ್ಳಿ, ವಾಮ, ಕರಿಮೆಣಸನ್ನು ಕಡೆದು ಸೇರಿಸಿ ಕಷಾಯವನ್ನು ತಯಾರಿಸಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿಯೇ ಕಷಾಯವನ್ನು ಸೇವಿಸಿದ ನಂತರ ಇದಕ್ಕೆ ಪೂರಕವಾಗಿ ಮೆಂತೆ ಗಂಜಿಯನ್ನು ಸೇವಿಸಲಾಗುತ್ತದೆ. ಆಷಾಢ ಮಾಸದಲ್ಲಿ ಹಾಳೆ ಮರದ ತೊಗಟೆಯಲ್ಲಿ ಅಪಾರ ಪ್ರಮಾಣದ ಔಷಧೀಯ ಗುಣ ಇರುತ್ತದೆ.

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !