ಮಂಗಳವಾರ, ಆಗಸ್ಟ್ 20, 2019
27 °C

ಉಡುಪಿ: ಆರೋಗ್ಯ ಅಧಿಕಾರಿಯ ಮೇಲೆ ಬಿಜೆಪಿ ಮುಖಂಡ ಯೋಗೀಶ್ ಹಲ್ಲೆ

Published:
Updated:

ಉಡುಪಿ: ನಗರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಪ್ರಸನ್ನ ಕುಮಾರ್ ಅವರ ಮೇಲೆ ಬಿಜೆಪಿ ನಗರಸಭಾ ಸದಸ್ಯ ಯೋಗೀಶ್ ಸಾಲ್ಯಾನ್ ಎಂಬುವರು ಹಲ್ಲೆ ನಡೆಸಿದ್ದಾರೆ.

ಪ್ರಸನ್ನ ಅವರ ಕಣ್ಣಿನ ಮೇಲ್ಭಾಗಕ್ಕೆ ಪೆಟ್ಟಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ವ್ಯಕ್ತಿ ವಂಡಭಾಂಡೇಶ್ವರ ಕ್ಷೇತ್ರದ ನಗರಸಭಾ ಸದಸ್ಯ.

ತೋಡನ್ನು ಸ್ವಚ್ಛಗೊಳಿಸುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಸಿಟ್ಟಿಗೆದ್ದ ನಗರಸಭಾ ಸದಸ್ಯ ಕಿರಿಯ ಆರೋಗ್ಯ ನಿರೀಕ್ಷಕರ ಕಚೇರಿಗೆ ನುಗ್ಗಿ ಹಲ್ಲೆ ಮಾಡಿದ್ದಾರೆ.

ಪೊಲೀಸರು ಹಲ್ಲೆಗೊಳಗಾದ ಅಧಿಕಾರಿಯಿಂದ ಹೇಳಿಕೆ ಪಡೆದುಕೊಂಡಿದ್ದು ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ‌.

Post Comments (+)