ಗುರುವಾರ , ನವೆಂಬರ್ 21, 2019
27 °C

ಎಟಿಎಂ ಕಾರ್ಡ್‌ ವಿವರ ಪಡೆದು ವಂಚನೆ

Published:
Updated:

ಉಡುಪಿ: ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆಮಾಡಿದ ವಂಚಕನೊಬ್ಬ ಉಮೇಶ್‌ ನಾಯಕ್‌ ಎಂಬುವರ ಬ್ಯಾಂಕ್‌ ಖಾತೆಯಿಂದ ₹ 99,999 ಹಣ ದೋಚಿದ್ದಾನೆ.

ಪೆರ್ಣಂಕಿಲದ ಉಮೇಶ ನಾಯಕ್‌ ಕೆನರಾ ಬ್ಯಾಂಕ್ ಮೂಡುಬೆಳ್ಳೆ ಶಾಖೆಯಲ್ಲಿ ಖಾತೆ ಹೊಂದಿದ್ದು, ಶನಿವಾರ ಬ್ಯಾಂಕ್‌ ಅಧಿಕಾರಿ ಹೆಸರಿನಲ್ಲಿ ಅವರಿಗೆ ಕರೆ ಬಂದಿದೆ. ಅವರನ್ನು ಮಾತಿನಲ್ಲಿ ನಂಬಿಸಿ, ಎಟಿಎಂ ಕಾರ್ಡ್‌ನ ವಿವರ ಹಾಗೂ ಒಟಿಪಿಯನ್ನು ಪಡೆದುಕೊಂಡಿದ್ದಾನೆ. ಬಳಿಕ ಖಾತೆಯಿಂದ ಕ್ರಮವಾಗಿ 39,900, 50,000, 10,000 ನಗದು ಡ್ರಾ ಮಾಡಿಕೊಂಡಿದ್ದಾನೆ. 

ಈ ಸಂಬಂಧ ಸೆನ್‌ ಠಾಣೆಯಲ್ಲಿ ಐ.ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)