ಬುಧವಾರ, ಸೆಪ್ಟೆಂಬರ್ 18, 2019
25 °C

ಬ್ಯಾಡ್ಮಿಂಟನ್‌: ಡೇನಿಯಲ್‌ಗೆ ಪ್ರಶಸ್ತಿ

Published:
Updated:
Prajavani

ಉಡುಪಿ: ಅಜ್ಜರಕಾಡು ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯವಾದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಡೇನಿಯಲ್‌ ಎಸ್‌.ಫರೀದ್ ಪ್ರಶಸ್ತಿ ಗೆದ್ದುಕೊಂಡರು.

ಕಿರಣ್‌ ಬಾಲಾಜಿ ವಿರುದ್ಧ ನಡೆದ ಅಂತಿಮ ಹಣಾಹಣಿಯಲ್ಲಿ 21-9, 21-9 ನೇರ ಸೆಟ್‌ಗಳಿಂದ ಡೇನಿಯಲ್‌ ವಿಜಯಿಯಾದರು.

ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಪ್ರಕಾಶ್‌ ರಾಜ್‌, ವೈಭವ್‌ ಜೋಡಿಯು 21-17, 21-23, 21-13  ಪಾಯಿಂಟ್ಸ್‌ಗಳಿಂದ ಆದರ್ಶ ಕುಮಾರ್‌, ಸಂಜೀತ್ ಜೋಡಿಯನ್ನು ಮಣಿಸಿತು.

19 ವರ್ಷದೊಳಗಿನವರ ಸಿಂಗಲ್ಸ್‌ನಲ್ಲಿ 15-21, 21-18, 21-19 ಸೆಟ್‌ಗಳಿಂದ ತೇಜಸ್‌ ಸಂಜಯ್‌ ಕೊಲ್ಲಾಕರ್ ಅವರನ್ನು ಭಾರ್ಗವ್‌ ಪರಾಭವಗೊಳಿಸಿದರು. ಡಬಲ್ಸ್‌ನಲ್ಲಿ ನಿತಿನ್‌ ಹಾಗೂ ಭಾರ್ಗವ್‌ ಜೋಡಿ 21-15, 21-14 ಪಾಯಿಂಟ್ಸ್‌ಗಳಿಂದ ಸಾಕೇತ್‌ ತೇಜಸ್‌ ಸಂಜಯ್‌ ಕೊಲ್ಲಾಕರ್ ಜೋಡಿಯನ್ನು ಸೋಲಿಸಿತು.

ಮಹಿಳೆಯರ ಸಿಂಗಲ್ಸ್‌ ಫೈನಲ್‌ನಲ್ಲಿ ರುಥ್‌ ಮಿಶಾ ವಿನೋದ್‌ 21-16, 21-11 ಸೆಟ್‌ಗಳಲ್ಲಿ ಗ್ಲೋರಿಯಾ ವಿನಯ್‌ಕುಮಾರ್ ಅಠಾವಳೆಯನ್ನು ಸೋಲಿಸಿದರೆ, ಡಬಲ್ಸ್‌ನಲ್ಲಿ ರಿಯಾ ಪಿಲ್ಲೈ, ರೂತ್ ಮಿಶಾ ಜೋಡಿಯು 21-13, 21-12 ಸೆಟ್‌ಗಳಿಂದ ನಿಶ್ಚಿತಾ ಹಾಗೂ ಪಾರ್ವತಿ ಕೃಷ್ಣನ್‌ ಜೋಡಿಯನ್ನು ಮಣಿಸಿತು.

19 ವರ್ಷದೊಳಿಗಿನ ಬಾಲಕಿಯರ ಫೈನಲ್‌ನಲ್ಲಿ ಕೃತಿ ಭಾರದ್ವಾಜ್‌ 16-21, 21-17, 21-10 ಪಾಯಿಂಟ್ಸ್‌ಗಳ ಅಂತರದಿಂದ ಅಲ್ಫಿಯಾ ರಿಯಾಜ್ ಬಸ್ರಿ ಅವರನ್ನು, ಡಬಲ್ಸ್‌ನಲ್ಲಿ ಗ್ಲೋರಿಯಾ ವಿನಯ್‌ಕುಮಾರ್ ಅಠಾವಲೆ ಹಾಗೂ ಅಕಾಂಕ್ಷ ಎಸ್‌.ಪೈ ಜೋಡಿಯು 21-17, 21-14 ಸೆಟ್‌ಗಳಿಂದ ದೀತ್ಯಾ, ರಮ್ಯಾ ವೆಂಕಟೇಶ್‌ ಜೋಡಿಯನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.

ಮಿಶ್ರ ಡಬಲ್ಸ್‌ ಫೈನಲ್‌ನಲ್ಲಿ ನಿತಿನ್‌, ರಮ್ಯಾ ವೆಂಕಟೇಶ್‌ ಜೋಡಿಯು21-15, 21-18 ಸೆಟ್‌ಗಳಿಂದ ಸುಹಾಸ್‌ ಜನನಿ ಜೋಡಿಯನ್ನು ಪರಾಭವಗೊಳಿಸಿತು.

Post Comments (+)