ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೂರು ಶಾರದೋತ್ಸವ ಸಂಪನ್ನ

Last Updated 6 ಅಕ್ಟೋಬರ್ 2022, 6:18 IST
ಅಕ್ಷರ ಗಾತ್ರ

ಬೈಂದೂರು: ಇಲ್ಲಿಗೆ ಸಮೀಪದ ಬಿಜೂರು ನಾಗ, ಯಕ್ಷಿ, ಹೈಗುಳಿ ದೈವಸ್ಥಾನದಲ್ಲಿ (ಬಯಲು ಆಲಯ) ಮೂರು ದಿನಗಳ ಕಾಲ ಸಾರ್ವಜನಿಕ ಶಾರದೋತ್ಸವ ವಿಜೃಂಭಣೆಯಿಂದ ಜರುಗಿತು.

ಮಂಗಳವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ‘ಸಲಹು ನಾಗಶಕ್ತಿ’ ವಿಡಿಯೊ ಸಾಂಗ್ ಡಿಜಿಟಲ್ ಅಲ್ಬಮ್‌ ಅನ್ನು ಸಾಹಿತಿ ಕೆ.ಪುಂಡಲೀಕ ನಾಯಕ್ ನಾಯ್ಕನಕಟ್ಟೆ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಈ ಉತ್ಸವಗಳ ಸ್ವರೂಪದಲ್ಲಿಯೇ ಸಹಬಾಳ್ವೆಯ ಸಂತೋಷದ ಪರಿಕಲ್ಪನೆ ಇದೆ. ಇದು ಸಾಮಾಜಿಕ ಸಾಮರಸ್ಯದ ಭಾಗವಾಗಿದ್ದು, ಅರ್ಥ ಮತ್ತು ಔಚಿತ್ಯವನ್ನು ಅರಿತು ಆಚರಿಸುತ್ತಿರುವ ಕಾರ್ಯಕ್ರಮ ಸಮಾನತೆ ಹಾಗೂ ಸಹೋದರತೆಯಿಂದ ಬದುಕಲು ಪ್ರೇರಣೆ ನೀಡುತ್ತದೆ ಎಂದರು.

ಭಕ್ತಿಗೀತೆಗೆ ಸಾಹಿತ್ಯ ರಚಿಸಿದ ಸ್ಥಳೀಯ ಶರತ್ ಶೆಟ್ಟಿ, ಗಾಯಕರಾದ ದಿನೇಶ್ ಆಚಾರ್ಯ, ಸುಪ್ರೀತಾ ಉಮೇಶ್ ಅವರನ್ನು ಗೌರವಿಸಲಾ
ಯಿತು. ಉಪನ್ಯಾಸಕ ರಾಜೀವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವಾಧ್ಯಕ್ಷ ಸಂತೋಷ ಆಚಾರ್ಯ, ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಇದ್ದರು.
ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುರೇಂದ್ರ ಶೆಟ್ಟಿ
ವಂದಿಸಿದರು. ಸ್ಥಳೀಯ ಪುಟಾಣಿ
ಗಳಿಂದ ನಾಟ್ಯ ವೈವಿಧ್ಯ, ಓಂ ಕಲಾ ತಂಡ ಮೊಗೇರಿ ಇವರಿಂದ ನಗೆ ನಾಟಕ ‘ನಮ್ದ ಎಂತ ಇತ್ತ್ ಎಲ್ಲ ಅವ್ನೆದೆ’ ಪ್ರದರ್ಶನ ಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT